ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಸುದ್ದಿಗೋಷ್ಠಿ.

210

ಮಂಡ್ಯ/ಮಳವಳ್ಳಿ:ಕಾವೇರಿ ತೀರದ ಕೊನೆಭಾಗದ ಜಮೀನುಗಳಿಗೆ ನೀರು ತಲುಪುವ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ ಪುಟ್ಟಮಾಧು ತಿಳಿಸಿದರು. ಮಳವಳ್ಳಿ ಪಟ್ಟಣದ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಾಲೆಗಳಲ್ಲಿ ಜಮೀನುಗಳಿಗೆ ನೀರು ಹಾಯಿಸಲು ಬಿಟ್ಟಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ಕಾವೇರಿ ಕೊನೆಭಾಗವಾದ ಮಳವಳ್ಳಿ ತಾಲ್ಲೂಕಿನ ರೈತರ ಜಮೀನಿಗೆ ನೀರುಬರುತ್ತಿಲ್ಲ, ಇದರಿಂದ ರೈತರು ಕಂಗಾಲಿಗಿದ್ದು, ಈ ಬಾರಿ ನೀರು ತಲುಪುವಂತೆ ಮಾಡಬೇಕು, ಎಂದು ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡುತ್ತದೆ ಎಂದರು. ಇದಲ್ಲದೆ ಇದೇ ಏ16 ರಂದು ಮಳವಳ್ಳಿ ಪಟ್ಟಣದ ರೈತಭವನದಲ್ಲಿ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಕ್ರಾಂತಿಕಾರಿ ಬಸವಣ್ಣ ನವರ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ವನ್ನು ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್ ನಾಗರಾಜು, ದಲಿತಸಾಹಿತಿ ಹುಲಿಕುಂಟೆ ಮೂರ್ತಿ, ಡಾ. ರಾಮಮನೋಹರ ರೋಹಿಯಾ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಡಾ. ಬಿ, ಎಸ್ ಶಿವಣ್ಣ ಸೇರಿದಂತೆ ಅನೇಕ ಗಣ್ಣರು ಆಗಮಿಸಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು. ‌ಗೋಷ್ಠಿಯಲ್ಲಿ ತಾಲ್ಲೂಕು ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲು,, ಹನುಮೇಶ ಇದ್ದರು