ತಜ್ಞರ ತಂಡದಿಂದ ಬೆಳ್ಳಂದೂರು ಕೆರೆ ವೀಕ್ಷಣೆ.

152

ಬೆಂಗಳೂರು/ಮಹದೇವಪುರ:- ಬೆಳ್ಳಂದೂರು ಕೆರೆಯ ವಾಸ್ತವ ಸ್ಥಿತಿಯನ್ನು ಅರಿಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಚಿಸಿರುವ ತಜ್ಞರ ತಂಡ ಇಂದು ಖುದ್ದು ಭೇಟಿ ನೀಡಿ ಕೆರೆಯ ಪೂರ್ಣ ಮಾಹಿತಿ ಪಡೆದಿದೆ.ಬೆಳ್ಳಂದೂರು ಕೆರೆ ಹಲವು ವರ್ಷಗಳಿಂದ ನೊರೆ, ಬೆಂಕಿ ವಿಚಾರಕ್ಕೆ ಸುದ್ದಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರನ್ನು ಕುಖ್ಯಾತಿಗೀಡುಮಾಡಿತ್ತು. ಹದಗೆಟ್ಟ ಜಲಮೂಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎನ್ಜಿಟಿ ಸ್ವಯಂ ದೂರು ದಾಖಲಿಸಿಕೊಂಡು ಹಲವು ಬಾರಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳಿಗೆ ಛೀಮಾರಿ ಹಾಕಿ, ಕೆರೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕ್ರಿಯಾಯೋಜನೆ ನೀಡಿತ್ತು, ಆದರೆ ಪ್ರಾರಂಭದಲ್ಲಿ ಕೆರೆಯ ಸ್ವಚ್ಚತಾ ಕಾರ್ಯ ವೇಗ ಕಂಡಿತಾದರೂ ಕ್ರಮೇಣ ವಿಳಂಬವಾಗಿದೆ, ಕೆರೆ ಸಂರಕ್ಷಣೆ ಹೊಣೆ ಹೊತ್ತಿದ್ದ ಬಿಡಿಎ, ಬಿಬಿಎಂಪಿ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಸಮರ್ಪಕ ಕಾರ್ಯ ವೈಖರಿಗೆ ಬೇಸತ್ತಿದ್ದ ಎನ್ಜಿಟಿ ದೆಹಲಿಯ ಹಿರಿಯ ವಕೀಲ ರಾಜ್ ಪಂಜವಾನಿ ನೇತೃತ್ವದಲ್ಲಿ ತಜ್ಞರ ತಂಡ ರಚಿಸಿ ಕೆರೆಗಳ ವಾಸ್ತವತೆಯನ್ನು ವರದಿ ಮಾಡುವಂತೆ ಸೂಚಿಸಿತ್ತು, ಆದೇಶದಂತೆ ಇಂದು ನಗರದ ಬೆಳ್ಳಂದೂರು ಕೆರೆಯಂಚಿನಲ್ಲಿರುವ ಸನ್ ಸಿಟಿ ಅಪಾರ್ಟ್ ಮೆಂಟ್ ಸ್ಥಳ, ಬೆಳ್ಳಂದೂರು ಕೋಡಿ ಹಾಗೂ ಯಮಲೂರು ಕೋಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ತಜ್ಞರ ತಂಡ ಕೆರೆಯ ವಾಸ್ತವತೆ ಅರಿಯಲು ಬೇಟಿ ನೀಡಿದ್ದು ಇವರು ಕೆರೆ ಅಭಿವೃದ್ಧಿ ವಿಚಾರದ ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.