ಬಿಜೆಪಿಗೆ ದಲಿತ ಸಂಘಟನೆಗಳ ಬೆಂಬಲ..?!

254

ಬೆಂಗಳೂರು ಗ್ರಾಮಾಂತರ/ಹೊಸಕೋಟೆ:ಬಿಜೆಪಿಗೆ ದಲಿತ ಸಂಘಟನೆಗಳ ಬೆಂಬಲ ನೀಡುವುದಾಗಿ ದಲಿತ ಸಂಘಟನೆಯ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಚಿನ್ನಸ್ವಾಮಿ ಹೇಳಿದರು ಅವರು ಪಟ್ಟಣದ ಯುವ ಶಕ್ತಿ ಕಛೆರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ತಾಲ್ಲೂಕಿನ ಶಾಸಕರು ದಲಿತ ವಿರೋಧಿಯಾಗಿದ್ದು ಅದನ್ನು ಖಂಡಿಸಿ ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಈ ಭಾರಿ ಬೆಂಬಲ ನೀಡುವುದಾಗಿ ತಿಳಿಸಿ, ಶಾಸಕರು ಅವಧಿಯಲ್ಲಿ ದಲಿತರು ತುಳಿತಕ್ಕೆ ಒಳಗಾಗಿದ್ದಾರೆ ಅವರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಸ್ವಜನ ಪಕ್ಷಪಾತ ದೋರಣೆಯನ್ನು ಅನುಸರಿಸುತ್ತಿದ್ದು ನಮ್ಮ ಜನಾಂಗದ ಅಭಿವೃದ್ಧಿಗೆ ಹಿಂದಿನ ಮಾಜಿ ಸಚಿವ ಬಚ್ಚೇಗೌಡರು ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿಮರ್ಾಣಕ್ಕೆ ನಿವೇಶನ ನೀಡಿ ಮಂಜೂರು ಮಾಡಿಸಿ  ಒಂದುವರೆ ಕೋಟಿ ಹಣವನ್ನು ಬಿಡುಗಡೆ ಗೊಳಿಸಿದ್ದಾರೆ. ಈ ವಿಚಾರದಲ್ಲಿ ಸುಳ್ಳು ಹೇಳುವ ಮೂಲಕ ದಲಿತರಿಗೆ ಈಗಿನ ಶಾಸಕರು ನಮ್ಮನ್ನು ಯಾಮಾರಿಸುತ್ತಾ ಬಂದಿದ್ದು ಅದನ್ನು ಮನಗೊಂಡು ಇಂದು ಹಲವಾರು ನಮ್ಮ ದಲಿತ ಮುಖಂಡರೊಂದಿಗೆ ಬಿಜೆಪಿಗೆ ಬೆಂಬಲ ನಿಡುತ್ತಿರುವುದಾಗಿ ತಿಳಿಸದರು. ನಂತರ ಮಾತನಾಡಿ ಮುಗಬಾಳ ಜಿಲ್ಲಾ ಪಂಚಾಯತಿ ಸದಸ್ಯ ವೈ.ಎಸ್.ಎಂ ಮಂಜುನಾಥ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಜನಾಂಗಕ್ಕೆ ಯಾವುದೇ ಸೌಲಭ್ಯಗಳನ್ನು ಮಾಡಿಲ್ಲಾ ಶಾಸಕರು ಯಾವುದೇ ದಲಿತರ ಪರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಈ ಭಾರಿ ಅವರನ್ನು ಬೆಂಬಲಿಸಲು ನನ್ನ ಮನಸು ಒಪ್ಪುತ್ತಿಲ್ಲ ಅದ್ದರಿಂದ ಈ ಭಾರಿ ಹಾಲಿ ಶಾಸಕರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲಾ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ ಎಂದು ತಿಳಿಸಿದರು. ಬಿಜೆಪಿ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ ದಲಿತ ಶಕ್ತಿಗಳ ಒಟ್ಟುಗೊಡಿ ಈ ಭಾರಿ ನಮ್ಮ ಯುವ ಮುಖಂಡ ಶರತ್ ಬಚ್ಚೇಗೌಡರನ್ನು ಬೆಂಬಲಿಸಲು ಮನವಿ ಮಾಡಿದರು.ಬೆಂಬಲ ಸೂಚಿಸಿದ ಇತರೆಯವರು ದಸಸಂ ನಾಗೇಶ್,ನಡುವತ್ತಿ,ಚಂದ್ರಪ್ಪ ಕೆ.ಸತ್ಯವಾರ,ಪಟ್ಟಣದ ರವಿ,ದರ್ಶನ್, ಹಾಜರಿದ್ದರೆ ಬಿಜೆಪಿ ಅಭ್ಯಥರ್ಿ ಶರತ್ ಬಚ್ಚೇಗೌಡ,ಗೋಪಾಲ್ ಗೌಡ,ಇಟ್ಟಸಂದ್ರ ಗೋಪಾಲ್,ಮಂಜುನಾಥ್ಗೌಡ,ರಾಜಶೇಖರ್ ಗೌಡ, ಬಿ.ವಿಬೈರೇಗೌಡ ಇತರರುಹಾಜರಿದ್ದರು.