ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಎಸಿ ಶ್ರೀನಿವಾಸ್.

221

ಸಾವಿರಾರು ಜನರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಎಸಿ ಶ್ರೀನಿವಾಸ್.ಬೆಂ

ಗಳೂರು/ಮಹದೇವಪುರ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸಿ ಶ್ರೀನಿವಾಸ್ ಸಹಸ್ರಾರು ಕಾರ್ಯಕರ್ತರೋಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಆರ್.ಪುರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಅವರು ನೆರೆದಿದ್ದ ಜನಸಾಗರದತ್ತ ಕೈ ಬೀಸಿ ಹುರಿದುಂಬಿಸಿದರು.

ಇನ್ನು ಅವರು ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ನನ್ನ ವಿರುದ್ದ ಬಿಜೆಪಿ ಯವರು ಇಲ್ಲಸಲ್ಲದ ಅರೋಪ ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ವರಿಷ್ಠರಿಗೆ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಉದಯ್ ಕುಮಾರ್, ಹರಿ ಪ್ರಸಾದ್, ರಮೇಶ್, ಬ್ಲಾಕ್ ಅಧ್ಯಕ್ಷ ಜಯರಾಂ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷ ಜನಾರ್ದನ್ ಗೌಡ, ಉಪಾಧ್ಯಕ್ಷ ರಾಜೇಶ್, ಮುಖಂಡರು ಜಗದೀಶ್ ರೆಡ್ಡಿ, ರಾಮಕೃಷ್ಣಪ್ಪ, ಎಂಸಿಸಿ ರವಿ ಸೇರಿದಂತೆ ಹಲವಾರು ಹಾಜರಿದ್ದರು.