ಪಕ್ಷೇತರ ಅಭ್ಯರ್ಥಿ ಮತಯಾಚನೆ..

311

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಗ್ರಾಮ ಪಂಚಾಯತಿ, ಕೊರ್ಲಪರ್ತಿ ಗ್ರಾಮ ಪಂಚಾಯತಿ,ಗಂಜಿ ಗುಂಟೆ ಗ್ರಾಮ ಪಂಚಾಯತಿ, ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ 25 ಹಳ್ಳಿಗಳ ಮನೆ ಮನೆಗೆ ಭೇಟಿ ನೀಡಿ ಮತಯಾಚನರ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ತಾಲ್ಲೂಕಿನ ಕೊರ್ಲಪರ್ತಿ ಗ್ರಾಮ ಪಂಚಾಯತಿಯ ದೊಡ್ಡ ಬಂದರಘಟ, ಚಿಕ್ಕ ಬಂದರಘಟ, ಗಂಜಿಗುಂಟೆ , ಹಳೆ ಗಂಜಿಗುಂಟೆ ಗ್ರಾಮಕ್ಕೆ ಮನೆ ಮನೆ ಭೇಟಿ ನೀಡಿ ಪಕ್ಷೇತರ ಅಭ್ಯರ್ಥಿ ಪುಟ್ಟ ಆಂಜಿನಪ್ಪ ರವರಿಗೆ 2018 ನೇ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಕೇಳಿದರು.

ನಾನು ಸುಮಾರು ವರ್ಷಗಳಿಂದ ಹಳ್ಳಿ ಹಳ್ಳಿಗೆ ತೆರಳಿ ಕೈಲಾದಷ್ಟು ಸಮಾಜ ಸೇವೆ ಮಾಡಿದ್ದೇನೆ.ಈ ಬಾರಿ ನನ್ನನ್ನು ಆಶೀರ್ವಾದ ಮಾಡಿ ನನ್ನನ್ನು ಕ್ಷೇತ್ರದ ಅಭ್ಯರ್ಥಿಯಾಗಲು ಆಶೀರ್ವಾದ ಮಾಡಿ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಸೇವೆ ಮಾಡಲು ಅವಕಾಶ ಮಾಡ ಕೊಡಿ ಎಂದು ಹಳ್ಳಿ ಹಳ್ಳಿಗೂ ತೆರಳಿ ಪುಟ್ಟ ಆಂಜಿನಪ್ಪ ಜನಪ್ರತಿನಿಧಿಗಳಲ್ಲಿ ಕೇಳಿದರು.

ನನ್ನ ಜೊತೆಗೆ ಬಹುತೇಕ ಎಲ್ಲಾ ಚುನಾಯಿತ ಪ್ರತಿನಿಧಿಗಳು ಗ್ರಾಮದ ಮುಖಂಡರು ಕಾರ್ಯಕರ್ತರು ನನ್ನ ಜೊತೆ ಇದ್ದಾರೆ ಎಂದರು.