ಚುನಾವಣಾ ಪ್ರಚಾರ ಪ್ರಾರಂಭ…

227

ಬೆಂಗಳೂರು/ಮಹದೇವಪುರ:-ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೇಪಿ ಅಭ್ಯರ್ಥಿ ಅರವಿಂದ್ ಲಿಂಬಾವಳಿ ಚುನಾವಣಾ ಪ್ರಚಾರವನ್ನು ಕ್ಷೇತ್ರದ ಗರುಡಾಚಾರ್ ಪಾಳ್ಯ ವಾರ್ಡಿನ ಶ್ರೀ ಮಹೇಶ್ವರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಕೆಲಸದ ಸಾಧನಾ ಕೈಪಿಡಿ ಪುಸ್ತಕವನ್ನು ಮತದಾರರಿಗೆ ತಲುಪಿಸಿತ್ತಿದ್ದೆವೆ.
ಪ್ರಚಾರದ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಲಿಂಬಾವಳಿ ಕ್ಷೇತ್ರದಲ್ಲಿ ಮುಖ್ಯವಾಗಿ ಐದು ಸಮಸ್ಯಗಳು ಕಾಡುತ್ತದೆ, ರಾಜ್ಯ ಸರ್ಕಾರಕ್ಕೆ ಎಷ್ಟೋ ಬಾರಿ ಮನವಿ ಮಾಡಿದರು ಯಾವದೆ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.
ಟ್ರಾಫಿಕ್, ಕೆರೆಗಳು, ಜನರ ರಕ್ಷಣೆಗಾಗಿ ಸಿಸಿ ಟಿವಿ ಅಳವಡಿಕೆ, ಬಾಂಗ್ಲಾದೇಶ ಪ್ರಜಗಲನ್ನು ಗಡಿಪಾರು ಮಾಡುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸ ಬೇಕಾದರೆ ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ, ಮುಖಂಡರು ಅನಂತರಾಮಯ್ಯ, ಆಶೋಕ್, ಕೃಷ್ಣಮೂರ್ತಿ, ಚನ್ನಸಂದ್ರ ಚಂದ್ರಶೇಖರ್, ಮಂಜುನಾಥ್ ಸೇರಿದಂತೆ ನೂರಾರು ಹಾಜರಿದ್ದರು.