ಪ್ರಭಾವಿ ಮುಖಂಡರ ದಿಢೀರ್ ಪಕ್ಷ ಸೇರ್ಪಡೆ…

241

ಮಂಡ್ಯ/ಮಳವಳ್ಳಿ:ಹಲಗೂರು ಹೋಬಳಿಯ ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡರೊಬ್ಬರು ದಿಢೀರ್ ನೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಘಟನೆ ಮಳವಳ್ಳಿ ಪಟ್ಟಣದ ದಲ್ಲಿ ನಡೆದಿದೆ.ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ಚಿಕ್ಕತಮ್ಮಯ್ಯರವರು ಯಾವ ಮಾನದಂಡವಿಲ್ಲದೆ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೇರ್ಪಡೆಯಾದರು.ಈ ಹಿಂದೆ ನಾಲ್ಕು ಬಾರಿ ಗ್ರಾ.ಪಂ ಸದಸ್ಯರಾಗಿದ್ದು , ಕಳೆದ ಬಾರೀ ತಾ.ಪಂ ಅಭ್ಯರ್ಥಿ ಯಾಗಿ ಸ್ವರ್ದೆಸಿ ಸೋಲನ್ನಪ್ಪಿದ್ದರು. ನಾನು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಇದ್ದೆ ಆದರೆ ಈಗ ನಮ್ಮ ನಾಯಕರು ಪಿ.ಎಂ ನರೇಂದ್ರ ಸ್ವಾಮಿರವರು ಕಾಂಗ್ರೆಸ್ ಪಕ್ಷಕ್ಕೆ ಇಂದಿನಿಂದ ನಿಷ್ಠೆಯಾಗಿರುತ್ತೆನೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು,ಪುಟ್ಟರಾಮು, ತಾ.ಪಂ ಸದಸ್ಯ ಶಂಕರ, ಜಿ.ಪಂ ಸದಸ್ಯ ಹನುಮಂತ, ಸುಜಾತಪುಟ್ಟು, ಸಿ.ಪಿ ರಾಜು ಸೇರಿದಂತೆ ಮತ್ತಿತ್ತರರು ಇದ್ದರು..