ಮಲಹೊರಿಸಿದವರ ವಿರುದ್ದ ದೂರು ದಾಖಲು

186

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಮಲಹೊರುವ ಅನಿಷ್ಟ ಪದ್ದತಿ ಜೀವಂತ, ಮಲಹೊರಸಿದ ಮಾಲಿಕರ ವಿರುದ್ದ ಪ್ರಕರಣ ದಾಖಲಾದ ಘಟನೆ ನಗರದಲ್ಲಿ ನಡೆದಿದೆ.

ನಗರದ 27 ನೇ ವಾರ್ಡ್ ಮಹಬೂಬ್ ನಗರದಲ್ಲಿ ನಡೆದಿದೆ.ಚಾನ್ ಪಾಷಾ ಎಂಬುವರು ನಾಲ್ಕುಜನ ಮುಗ್ದ ಕೂಲಿಕಾರ್ಮಿಕ ರಿಂದ ತಮ್ಮ ಮನೆಯ ಮಲ ತುಂಬಿದ್ದ ಫಿಟ್ ಗುಂಡಿಯ ಗಲೀಜನ್ನು ಎತ್ತಿಸುತ್ತಿದನ್ನು ಗಮನಿಸಿದ ನಗರಸಭೆಯ ಅಧಿಕಾರಿಗಳು ನಗರ ಠಾಣೆಗೆ ದೂರು ನೀಡಿ ಮಾಲಿಕನ ವಿರುದ್ಧ ಪ್ರಕರಣ ದಾಖಲು ಮಾಡಿದ ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಚಾನ್ ಪಾಷ ಎಂಬುವರು ಪಿಟ್ ಗುಂಡಿಯಲ್ಲಿದ್ದ ಮಲ ತೆಗೆಯಲು ಒಂದು ಸಾವಿರ ರೂಪಾಯಿಗಳಿಗೆ ಒಪ್ಪಿಸಲಾಗಿತ್ತು. ತುಂಬಿದ ಪಿಟ್ ಗುಂಡಿಯಲ್ಲಿ ಮಲವನ್ನೆಲ್ಲಾ ಸ್ವಚ್ಚ ಗೊಳಿಸುವ ವೇಳೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ,ತಪ್ಪಿತಸ್ಥರ ವಿರುದ್ದ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ನಗರಸಭೆ ಆಯುಕ್ತ ಚಲಪತಿ ಮಾಹಿತಿಯ ಪ್ರಕಾರ ಮಲ ಎತ್ತುವುದು ನಿಷೇದವಾಗಿರುವ ವಿಚಾರ ಗೊತ್ತಿದ್ದರೂ ಸಹಾ ಉಲ್ಲಂಘನೆಮಾಡಿ ಮನೆ ಮಾಲಿಕ ಮಲ ಎತ್ತಿಸುತ್ತಿದ್ದರಿಂದ ಆತನ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.