ಮಾಜಿ ಶಾಸಕರ ಮನೆ ಮನೆ ಪ್ರಚಾರ ಕಾರ್ಯಕ್ರಮ..

228

ಬೆಂಗಳೂರು/ಕೆ.ಆರ್.ಪುರ:- ಗೂಂಡಾಗಿರಿಯಿಂದ ರಾವಣರಾಜ್ಯವಾಗಿ ಬದಲಾಗಿರುವ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ರಾಮರಾಜ್ಯವಾಗಿ ಮಾಡುವ ಹೊಣೆ ನಮ್ಮ ಮೇಲಿದೆ ಎಂದು ಮಾಜಿ ಶಾಸಕ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಎಸ್.ನಂದೀಶ್ರೆಡ್ಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಕ್ಷೇತ್ರದ ಬಸವನಪುರ ವಾರ್ಡ್ ನಲ್ಲಿ ಮನೆ ಮನೆ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರವನ್ನು 2008 ರಿಂದ 2013 ರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ದಿ ಪಡಿಸಲಾಯಿತು.ಬಡ ಜನರಿಗೆ ಸ್ಲಂ ಬೋರ್ಡ್ ವತಿಯಿಂದ ಸುಮಾರು 2500 ಮನೆಗಳನ್ನು ಕಟ್ಟಸಿ ವಾಸಕ್ಕೆ ನೀಡಲಾಯಿತು. ಸುಮಾರು ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿ 30 ಕೆಜಿ ಅಕ್ಕಿ, ಗೋದಿ, ಸಕ್ಕರೆ ನೀಡಲಾಗಿದ್ದು ಇಂದು ಬರಿ ಅಕ್ಕಿಮಾತ್ರ ನೀಡಲಾಗುತ್ತಿದೆ ಎಂದು ದೂರಿದರು. ಕ್ಷೇತ್ರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ನೀಡಲು ಹೆಚ್ಚಿನ ಕಾವೇರಿ ನೀರು ಕ್ಷೇತ್ರಕ್ಕೆ ತರಲಾಯಿತು. ಸರ್ಕಾರದಿಂದ ಬಿಡುಗಡೆಯಾಗುವ ಹಣದಲ್ಲಿ ಇಂದಿನ ಶಾಸಕರು ಗುಂಡಾಗಳನ್ನು ಬೆಳೆಸಿದ್ದಾರೆ ಎಂದು
ಟೀಕಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಹೆಣ್ಣು ಮಗು ಜನಿಸಿದರೆ ಒಂದು ಲಕ್ಷ ರೂ ಭಾಗ್ಯಲಕ್ಷ್ಮೀ ಬಾಂಡ್ ನೀಡಲಾಗುತ್ತಿದ್ದನ್ನು ಇಂದಿನ ಸಕರ್ಾರ ಅದನ್ನು ರದ್ದುಪಡಿಸಿದ್ದಾರೆ ಎಂದರು. ಬಿಜೆಪಿ ಸಕರ್ಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಯೋಜನೆಗಳನ್ನು ಸಂಪೂರ್ಣ ರದ್ದು ಪಡಿಸಲಾಗಿದೆ ಎಂದು ದೂರಿದರು. ಇದಕ್ಕೆಲ್ಲ ಜನರು
ಉತ್ತರವಾಗಿ ಜನರು ಇಂದಿನ ಸಕರ್ಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂಬ ಘೋಷಣೆಯಂತೆ ನನಗೆ
ಆಶೀರ್ವಾದ ಮಾಡಿ ಗೆಲ್ಲಿಸಿ ಈ ಕ್ಷೆತ್ರದ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಬದಲ್ಲಿ ಮುಖಂಡರುಗಳಾದ ಡಿ.ಕೆ.ದೇವೇಂದ್ರ, ವಾರ್ಡ್ ಅಧ್ಯಕ್ಷ ಆಂಜನೇಯ್ಯಗೌಡ, ಮಾಜಿ ಕ್ಷೇತ್ರ ಅಧ್ಯಕ್ಷ ಶಿವರಾಜು, ಪ್ರಧಾನ ಕಾರ್ಯದರ್ಶಿ ಶ್ರೀರಾಮುಲು, ಶಿವಕುಮಾರ್,
ಎಸ್.ಟಿ. ಮೋರ್ಚ ಅಧ್ಯಕ್ಷ ರಾಮಚಂದ್ರಪ್ಪ, ಗಗನ್ಯಾದವ್
ಮುಂತಾದವರು ಹಾಜರಿದ್ದರು.