ಮತ್ತೆ ಅಧಿಕಾರಕ್ಕೆ ಬಂದು ವಿರೋಧಿಗಳಿಗೆ ತಕ್ಕ ಪಾಠ…!

190

ಮಂಡ್ಯ/ಮಳವಳ್ಳಿ; ಬಡವರ ಸರ್ಕಾರದ ನೇತಾರ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡುತ್ತಿರುವವಗೆ ಕಾಂಗ್ರೆಸ್ ಅಧಿಕಾರ ತರುವ ಮೂಲಕ ತಕ್ಕ ಪಾಠ ಕಳುಹಿಸಿ ಎಂದು ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ ನರೇಂದ್ರ ಸ್ವಾಮು ತಿಳಿಸಿದರು.

ಮಳವಳ್ಳಿ ತಾಲ್ಲೂಕು ಬಿಜಿಪುರ ಹೋಬಳಿ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಗಡಹಳ್ಳಿ, ನಾರಾಯಣ ಪುರದಲ್ಲಿ ಪ್ರಚಾರದಲ್ಲಿ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಸಂಕಷ್ಟ, ಬರಗಾಲವಿದ್ದರೂ ಅನ್ನಭಾಗ್ಯ, ಸೇರಿದಂತೆ ಭಾಗ್ಯಗಳ ಯೋಜನೆ ತಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಯಾಗಬೇಕಾದರೆ ಈ ಬಾರೀ ಅವರ ಕೈ ಬಲಪಡಿಸಲು ನನ್ನನ್ನು ಸಹಾ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.

ಈ ಭಾಗದಲ್ಲಿ ಹಸಿರು ಕಾಂತ್ರಿ ಮಾಡಿದ್ದೇನೆ. ಈ ಗಾಗಲೇ ಈ ಭಾಗ ಬರಡುಭೂಮಿಯಾಗಿದ್ದು, ಮುಂದಿನಗಳಲ್ಲಿ ಜನರು ಸದಾ ನೆನೆಯುವಂತಹ ಯೋಜನೆಯನ್ನು ಜಾರಿಗೆ ತಂದಿದ್ದು , ಇನ್ನೂ ಹಲವು ಯೋಜನೆಗಳು ಜಾರಿಗೆ ಯಾಗಬೇಕಾಗಿವೆ. ಅದನ್ನು ಪೂರ್ಣಗೊಳಿಸಲು ಮತ್ತೆ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ ಅದ್ಯಕ್ಷ ವಿಶ್ವಾಸ್, ತಾ ಪಂ ಮಾಜಿ ಅಧ್ಯಕ್ಷ ಪ್ರಕಾಶ್, ಎಪಿಎಂಸಿ ಅಧ್ಯಕ್ಷ ಅಂಬರೀಶ್, ಅಮೃತ ಕಂಠೇಶ್, ಜಿ.ಪಂ ಸದಸ್ಯೆ ಸುಜಾತಸುಂದ್ರಪ್ಪ, ಸೇರಿದಂತೆ ಮತ್ತಿತ್ತರರು ಇದ್ದರು