ಅಭ್ಯರ್ಥಿಗೆ ಕ್ಷೀರಾಭಿಷೇಕವನ್ನು ಮಾಡುವ ಮೂಲಕ ಸ್ವಾಗತ..

217

ಮಂಡ್ಯ/ಮಳವಳ್ಳಿ:ಪ್ರಚಾರ ವೇಳೆಯಲ್ಲಿ ಅಭ್ಯರ್ಥಿಗೆ ಕ್ಷೀರಾಭಿಷೇಕವನ್ನು ಮಾಡುವ ಮೂಲಕ ಕಾರ್ಯಕರ್ತರು ಸ್ವಾಗತಿಸಿದ ಘಟನೆ ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದಲ್ಲಿ ನಡೆದಿದೆ. ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮಕ್ಕೆ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಡಾ.ಕೆ ಅನ್ನದಾನಿ ರವರು ಪ್ರಚಾರಕ್ಕೆ ಆಗಮಿಸಿದಾಗ ಕಾರ್ಯಕರ್ತರು ಬಿಂದಿಗೆಯಲ್ಲಿ ಕ್ಷೀರಾಭಿಷೇಕ ಮಾಡಿದರು . ನಂತರ ಅಭ್ಯರ್ಥಿ ಅನ್ನದಾನಿ ಮಾತನಾಡಿ, ಶಾಸಕ ನರೇಂದ್ರ ಸ್ವಾಮಿ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನರೇಂದ್ರ ಸ್ವಾಮಿ ಬಗ್ಗೆ ಮಾತನಾಡಬೇಡಿ ಎಂದಾಗ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅನ್ನದಾನಿ ಇದು ನರೇಂದ್ರ ಸ್ವಾಮಿ ರವರ ಸರ್ಕಾರವಲ್ಲ ಜನರ ಸರ್ಕಾರ ನೀವು ಮತ ನೀಡದ್ದಿದ್ದರೆ ಅವರು ಶಾಸಕರಾಗುತ್ತಿರಲಿಲ್ಲ , ಅವರ ಗೊಡ್ಡು ಬೆದರಿಕೆ ಹೆದರುವುದಿಲ್ಲ, ಇವರಪ್ಪ ನಂತಹ ರಾಜಕೀಯ ಮಾಡಿದ್ದೇನೆ ಎಂದು ಖಾರವಾಗಿ ನುಡಿದರು, ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ರಾಮಚಂದ್ರ, ದೊಡ್ಡಯ್ಯ ಜಯರಾಮು ಸೇರಿದಂತೆ ಮತ್ತಿತ್ತರರು ಇದ್ದರು