ಉಚಿತ ಕಂಪ್ಯೂಟರ್ ಮತ್ತು ಟೈಲರಿಂಗ್ ತರಭೇತಿ ಶಿಭಿರಗಳು

296

ಬೆಂಗಳೂರು (ಕೃಷ್ಣರಾಜಪುರ):  ಗೃಹಿಣಿಯರು ಮತ್ತು ಯುವತಿಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಗಳಿಗೆ ಕೊಂಡೊಯ್ಯಲು ಸಂಘ ಸಂಸ್ಥೆಗಳು ಶ್ರಮಿಸಬೇಕೆಂದು ಮಾಜಿ ನಗರ ಸಭಾ ಸದಸ್ಯ ಡಿ.ಎ.ಗೋಪಾಲ್ ತಿಳಿಸಿದರು. ಇಲ್ಲಿನ ಅಯ್ಯಪ್ಪನಗರದ ಸೀ ಕಾಲೇಜ್ ಬಳಿ ಉಚಿತ ಕಂಪ್ಯೂಟರ್ ಮತ್ತು ಟೈಲರಿಂಗ್ ತರಭೇತಿ ಶಿಭಿರಗಳನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಹೆಣ್ಣು ಮಕ್ಕಳು ಶತಮಾನಗಳಿಂದ ಪುರುಷಪ್ರಧಾನ ಸಮಾಜದಲ್ಲಿ ಶೋಷಣೆಗೊಳಗಾಗುತ್ತಾ ಬಂದಿದ್ದಾಳೆ, ಕೇವಲ ನಾಲ್ಕು ಕೋಣೆಯಲ್ಲಿಯೇ ಬದುಕುತ್ತಿದ್ದ ಮಹಿಳೆ ಇಂದು ಹೊಸಲು ದಾಟಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸುವಲ್ಲಿ ನಿರತರಾಗಿದ್ದಾರೆ.

ಶ್ರೀ ಎ.ಕೃಷ್ಣಪ್ಪಾಜಿ ಸೇವಾ ಟ್ರಸ್ಟ್‍ವತಿಯಿಂದ ಆಯೋಜಿಸಿರುವ ಉಚಿತ ಟೈಲರಿಂಗ್ ಮತ್ತು ಕಂಪ್ಯೂಟರ್ ತರಭೇತಿಯನ್ನು ಮಹಿಳೆಯರು ಪಡೆಯುತ್ತಿರುವುದು.


ಆರ್ಥಿಕವಾಗಿ ಹಿಂದುಳಿತದಿಂದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ, ಶಿಕ್ಷಣವಿದ್ದರೂ ಉದ್ಯೋಗ ಸಮಸ್ಯೆಯೂ ಸಹ ಕಾಡುತ್ತಿದೆ, ಆದ ಕಾರಣ ಮಹಿಳೆಯರ ಸಬಲೀಕರಣಕ್ಕೆ ಸ್ವಂತ ಉದ್ಯೋಗಗಳ ಸೃಷ್ಟಿಯಾಗಬೇಕಿದೆ ಎಂದು ತಿಳಿಸಿದರು. ಕಂಪ್ಯೂಟರ್ ಮತ್ತು ಟೈಲರಿಂಗ್ ತರಭೇತಿಗಳಿಂದ ಮದ್ಯಮ ವರ್ಗದ ಹೆಣ್ಣು ಮಕ್ಕಳಿಗೂ ಕೈಗೆಟುಕದಂತಾಗಿದೆ, ಮಾಜಿ ಸಚಿವ ಶ್ರೀ ಎ.ಕೃಷ್ಣಪ್ಪಜೀ ಸೇವಾ ಟ್ರಸ್ಟ್‍ವತಿಯಿಂದ ಹೆಣ್ಣು ಮಕ್ಕಳು ಮತ್ತು ಗೃಹಿಣಿಯರಿಗೆ ಟೈಲರಿಂಗ್ ಹಾಗು ಕಂಪ್ಯೂಟರ್ ತರಭೇತಿಯನ್ನು ಉಚಿತವಾಗಿ ದೇವಸಂದ್ರ, ಅಯ್ಯಪ್ಪನಗರ ಮತ್ತು ತಂಬುಚಟ್ ಪಾಳ್ಯದಲ್ಲಿ ಮೂರು ಕಡೆಗಳಲ್ಲಿ ನೀಡಲಾಗುತ್ತಿದೆ, ದಿನವೊಂದಕ್ಕೆ ಒಬ್ಬರಿಗೆ ಒಂದು ಘಂಟೆಯಂತೆ ತರಭೇತಿ ನೀಡಲಾಗುವುದು ಒಬ್ಬ ಮಹಿಳೆ ಎರಡು ತರಭೇತಿಗಳನ್ನು ಪಡೆಯಬಹುದಾಗಿದ್ದು, ಈ ಸದಾವಾಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಮಹಿಳೆ ಇಂದು ಸಮಾಜದಲ್ಲಿ ಯಾವುದೇ ಕಾರಣಕ್ಕೂ ಅಬಲೆಯಾಗಬಾರದೆಂಬ ಹಾಗು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಷ್ಟು ಸಮರ್ಥಳನ್ನಾಗಿ ಮಾಡುವ ಹಿನ್ನೆಲೆ ಈ ಶಿಭಿರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಉಚಿತ ತರಭೇತಿಯನ್ನು ಪಡೆದುಕೊಳ್ಳುತ್ತಿರುವ ಹೆಣ್ಣು ಮಕ್ಕಳು ಸಹ ಸಂತಸ ವ್ಯಕ್ತಪಡಿಸಿದ್ದು, ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜಾಗೋಪಾಲಾಚಾರಿ, ವಕೀಲ ರಮೇಶ್, ಬೈರೇಗೌಡ ಸೇರಿದಂತೆ ಟ್ರಸ್ಟ್‍ನ ಮುಖಂಡರು ಹಾಜರಿದ್ದರು.