ಪಕ್ಷೇತರ ಅಭ್ಯರ್ಥಿಯ ಮನೆ ಮನೆ ಪ್ರಚಾರ.

222

ಬೆಂಗಳೂರು/ಮಹದೇವಪುರ; ಸ್ಥಳೀಯ ಅಭ್ಯರ್ಥಿಯಾದ ನನಗೆ ಕ್ಷೇತ್ರದ ಜನರು ಆಶೀರ್ವದಿಸಿ…
ಹೆಚ್ಚನ ಬಹುಮತಗಳಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಟಿ.ನಾಗೇಶ್ ತಿಳಿಸಿದರು.
ಕ್ಷೇತ್ರದ ವರ್ತೂರು ಹೋಬಳಿ ವಿವಿಧ ಗ್ರಾಮ ಗಳಲ್ಲಿ ಮನೆ ಮನೆಗೆ ಬಿರಿಸಿನ ಪ್ರಚಾರನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಹದೇವಪುರ ವಿಧಾನ ಸಭಾ ಕ್ಷೇತ್ರ ಮೀಸಲಾಗಿ ಎರಡು ಅವಧಿಯಿಂದ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆಪಿಸಿಸಿ ಅಧ್ಯಕ್ಷ ಡಾ||ಜಿ.ಪರಮೇಶ್ವರ್ ಬಳಿ ವಿಧವಿಧವಾಗಿ ಬೇಡಿಕೆಯಿಟ್ಟರೂ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದೆ ಎರಡೂ ಅವಧಿಯಲ್ಲೂ ಹೊರಗಡೆವ್ಯೆಕ್ತಿಗಳಿಗೆ ಅವಕಾಶ ನೀಡಿರುತ್ತಾರೆ. ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಈಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಾ||ಜಿ.ಪರಮೇಶ್ವರ್ ಮಹದೇವಪುರ ವಿಧಾನ ಸಭಾ
ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಎಡುವಿದ ಕಾರಣ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೋಲುಂಟಾಯಿತು. ಆದರೆ ಈ ಕ್ಷೇತ್ರದ ಮೂಲ ನಿವಾಸಿಗಳಾದ ದಲಿತರು ಸ್ಥಳೀಯರಿಗೆ
ಟಿಕೇಟ್ ನೀಡಿ ಎಂದು ಮನವಿ ಸಲ್ಲಿಸಿದರೂ ಲೆಕ್ಕಿಸದೆ ಸ್ಥಳೀಯ ದಲಿತರನ್ನುಕಡೆಗಣಿಸಲಾಗಿದೆ ಎಂದರು. ಕೆಪಿಸಿಸಿ ವತಿಯಿಂದ ಮಾಡಿರುವ ತಪ್ಪಿಗೆ ಉತ್ತರಿಸಲು ಈ ಬಾರಿ ಮಹದೇವಪುರ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಲಾಗಿದೆ ಎಂದರು.
ಹಾಕಿ ಬ್ಯಾಟ್ ಮತ್ತು ಬಾಲ್ ಗುರುತಿಗೆ ಸ್ಪರ್ಧಿಸಿರುವ ನನಗೆ ಕ್ಷೇತ್ರದ ಎಲ್ಲಾ
ಗ್ರಾಮಗಳಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ವರ್ತೂರು
ಹೋಬಳಿಯ ಗ್ರಾಮಗಳಲ್ಲಿ ಒಳ್ಳೆಯ ಬೆಂಬಲ ದೊರೆಯುತ್ತಿದ್ದು ಕ್ಷೇತ್ರದ ಎಲ್ಲಾಗ್ರಾಮಗಳಲ್ಲಿ ಮತದಾರರ ಬೆಂಬಲದಿಂದ ಚುನಾವಣೆಯಲ್ಲಿ ಅಧಿಕ ಬಹುಮತಗಳಿಂದ ಆಯ್ಕೆಯಾಗಿ
ಕೆಪಿಸಿಸಿ ವರಿಷ್ಟರಿಗೆ ತಕ್ಕ ಉತ್ತರ ನೀಡುವುದಾಗಿ ಅವರು ತಿಳಿಸಿದರು.
ಈ ಸಂದರ್ಬದಲ್ಲಿ ಸೋರುಣಿಸೆ ವೆಂಕಟೇಶ್, ಎನ್.ಗೋವರ್ಧನ್, ಜೆ.ಸಿ.ಮುನಿಯಲ್ಲಪ್ಪ,
ವಿಜಯಕುಮಾರ್, ವತರ್ೂರು ರವೀಶ್, ರಾಜಪ್ಪ, ರಾಜಣ್ಣ ಮುಂತಾದವರು ಹಾಜರಿದ್ದರು.