ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ…

339

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ಶಾಂತಿನಗರ,ಕಚೇರಿ ಪಾಳ್ಯದ ನೂರಾರು ಯುವಕರು ಕಾಂಗ್ರೆಸ್ ಸೇರ್ಪಡೆ.
ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡ ಯುವಕರ ನಾಯಕ ಮಂಜುನಾಥ್ ಮಾದ್ಯಮದೊಂದಿಗೆ ಮಾತನಾಡುತ್ತಾ ಹತ್ತಾರು ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದಿದ್ದೇವೆ, ಆದರೆ ನಮ್ಮನ್ನು ಗುರಿತಿಸಿಲ್ಲ ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರವಷ್ಟೆ ಬಾವುಟ,ಬಂಟಿಂಗ್ಸ್ ಕಟ್ಟುವುದಕ್ಕಷ್ಟೇ ನಮ್ಮನ್ನು ಬಳಸಿಕೊಂಡು ನಮ್ಮನ್ನು ಕಡೆಗಣಿಸಲಾಗುತ್ತಿತ್ತು ಅದರಲ್ಲೂ ಬಿಜೆಪಿ ಪಕ್ಷ ಎಂದರೇ ಕೇವಲ ಸವರ್ಣೀಯರ ಪಕ್ಷ ಅನ್ನೋ ಆರೋಪ ಕೇಳಿಬರುತ್ತಿತ್ತಾದರೂ ಮುಂದೆ ಸರಿಹೋಗಬಹುದೆಂಬ ಆಶಾಭಾವಣೆ ಯಿಂದ ಸಹಿಸಿಕೊಂಡಿದ್ದೆವು.ಕೊನೆಗೂ ನಾವು ಹಿಂದುಳಿದ ವರ್ಗದವರಾದರಿಂದ ನಮಗೆ ವಂಚನೆ ಮಾಡಿದರು.
ಪಕ್ಷದಲ್ಲಿ ನಿಷ್ಟಾವಂತರಿಗೆ ಸ್ಥಾನಮಾನ ನೀಡದೆ ಜೀ ಹುಜೂರ್ ಎನ್ನುವ ಅವಕಾಶವಾದಿಗಳಿಗಷ್ಟೇ ಬಿಜೆಪಿ ಪಕ್ಷ ಸೀಮಿತ ವಾಗಿದೆ.ಸ್ಥಳೀಯ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗಿಂತ ಮುಖಂಡರ ಸಂಖ್ಯೆಯೆ ಹೆಚ್ಚಾಗಿದ್ದು ನೆನ್ನೆಮೊನ್ನೆಯವರೆಲ್ಲಾ ನಾನೂ ನಾಯಕ ಎಂದು ಫೋಜುಕೊಡುವವರೇ ಹೊರಿತು ಅವರಿಂದ ಪಕ್ಷಕ್ಕೆ ಮೂರುಕಾಸಿನ ಉಪಯೋಗವಿಲ್ಲವರೇ ತುಂಬಿರುವಾಗ ನಾವು ಅಲ್ಲಿರುವುದು ಬೇಡ ಎಂಬ ನಿರ್ಧಾರ ಮಾಡಿದೆವು. ಇಷ್ಟೆಲ್ಲಾ ಆದರೂ ನಿರ್ಲಕ್ಷ್ಯ ತೋರುವ ಪಕ್ಷದ ಜವಾಬ್ದಾರಿಯುತ ಮುಖಂಡರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಕೇವಲ ಶೋಮ್ಯಾನ್ ಗಳೇ ತುಂಬಿರುವ ಬಿಜೆಪಿ ಪಕ್ಷದಲ್ಲಿ ಸಭೆ ಸಮಾರಂಭಗಳಲ್ಲಿ ಫೋಟೊಗೆ ಫೋಜು ಕೊಡುವ ಸೋಂಬೇರಿಗಳೇ ತುಂಬಿರುವ ಅವರಜೊತೆ ನಾವಿರುವುದು ಸೂಕ್ತವಲ್ಲ ಎಂಬ ನಿರ್ಧಾರ ಕೈಗೊಂಡು ಪಕ್ಷದಿಂದ ಹೊರಬಂದ ಇಡೀ ನಮ್ಮ ತಂಡ ಶಾಸಕ ಟಿ.ವೆಂಕಟ ರಮಣಯ್ಯ ನವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾಗುತ್ತಿದ್ದೇವೆ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.