ಬ್ರೀವ್ ಬಿಕ್ಯು ೨೦೧೮ರ ಆಹಾರ ಮೇಳ

170

ಬೆಂಗಳೂರು/ಕೃಷ್ಣರಾಜಪುರ:– ನಿತ್ಯವೂ ಕೆಲಸದ ಜಂಜಾಟದಲ್ಲೇ ದಿನದೂಡಿದ್ದ ಬೆಂಗಳೂರಿಗರು ವಾರಾಂತ್ಯದಲ್ಲಿ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸಿದ್ದ ಬ್ರೀವ್ ಬಿಕ್ಯು ೨೦೧೮ರ ಆಹಾರ ಮತ್ತು ಮಧ್ಯಪಾನ ಮೇಳದಲ್ಲಿ ಮಿಂದು ಸಂತಸಪಟ್ಟರು.

ವೈಟ್ ಫೀಲ್ಡ್ ಬಳಿಯ ಬೆಂಗಳೂರಿಗರ ನೆಚ್ಚಿನ‌ ಶಾಪಿಂಗ್ ತಾಣ ಫೀನಿಕ್ಸ್‌ ಮಾರ್ಕೆಟ್ ಸಿಟಿ ಮಾಲ್ ನಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಡಿ ಹಮ್ಮಿಕೊಂಡಿದ್ದ ಬ್ರೀವ್ ಬಿಕ್ಯು ಫೆಸ್ಟಿವಲ್ ಸಿಲಿಕಾನ್ ಸಿಟಿ ಮಂದಿಯ ನಿತ್ಯದ ಒತ್ಯಡ ಬದುಕಿನಿಂದ ಹೊರತರುವ ಪ್ರಯತ್ನ ನಡೆಸಿತ್ತು, ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿಗರು ವಿವಿಧ ಬಗೆಯ ಮಧ್ಯ ಮತ್ತು ಆಹಾರ ಖಾದ್ಯಗಳನ್ನು ಸೇವಿಸಿ ಸಂತುಷ್ಟಗೊಂಡರು.
ಖ್ಯಾತ ಅಡುಗೆ ತಯಾರಕರು ಸಿದ್ಧಪಡಿಸಿದ್ದ ಬಗೆ ಬಗೆಯ ಖಾದ್ಯಗಳು ನೆರೆದಿದ್ದವರ ಬಾಯಲ್ಲಿ ನೀರೂರಿಸಿತ್ತು, ಕಾರ್ಯಕ್ರಮದಲ್ಲಿ ಪ್ರಖ್ಯಾತ ಸಂಗೀತಗಾರರು ನಡೆಸಿಕೊಟ್ಟ ಸಂಗೀತ ಗೋಷ್ಠಿ ಜನರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯದಂತಿತ್ತು.
ಜಗತ್ತಿನ ಪ್ರಸಿದ್ಧ ಡಿಜೆಗಳಾದ ಝೆಯೆನ್, ಜಸ್ಮೀತ್, ವಿಪುಲ್ ಖುರಾನಾ ರೋಹಿತ್ ನಡೆಸಿಕೊಟ್ಟ ಡಿಜೆ ಕಾರ್ಯಕ್ರಮ ಬೆಂಗಳೂರಿಗರ ತಲೆ ದೂಗುವಂತೆ ಮಾಡಿತ್ತು.
ಒಟ್ಟಾರೆ ನಿತ್ಯವೂ ಕೆಲಸ, ಮನೆಯ ಜಂಜಡದಲ್ಲಿ ಕಳೆದು ಹೋಗಿದ್ದ ಮಂದಿ ಸ್ವರ್ಗಕ್ಕೆ ಲಗ್ಗೆ ಇಟ್ಟಂತೆ ಕಂಡು ಬಂತು.
ಸುದ್ದಿಚಿತ್ರ : ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಲ್ಲಿ ಆಯೋಜಿಸಿದ್ದ ಬ್ರೀವ್ ಬಿಕ್ಯು ೨೦೧೮ ಫಿಸ್ಟಿವಲ್ ನಲ್ಲಿ ವಿವಿಧ ಖಾದ್ಯ ಮತ್ತು ಮಧ್ಯವನ್ನು ಬೆಂಗಳೂರಿಗರು ಸವಿದರು.