ಕೆರೆಯನ್ನು ಕಬಳಿಸಲು ಹುನ್ನಾರ…!?

195

ಬೆಂಗಳೂರು/ಮಹದೇವಪುರ:- ಕ್ಷೇತ್ರದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಕೆರೆಯನ್ನು ಅಕ್ರಮಿಸಿಕೋಳ್ಳಲು ಹುನ್ನಾರ ನಡೆಸುತ್ತಿದ್ದರು ಕಂಡು ಕಾಣದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ಆರೋಪಿಸಿದರು.
ಈ ವೇಳೆ ಅವರು ಮಾತನಾಡುತ್ತಾ
ವೈಟ್ಪೀಲ್ಡ್ ಸಮೀಪದ ಪಟ್ಟಂದೂರು ಅಗ್ರಹಾರ ಕೆರೆಯ ಸರ್ವೆ ನಂಬರ ೫೨ ರಲ್ಲಿ೧೩.೩೦ ಎಕರೆ ವಿಸ್ತಾರವಾದ ಕೆರೆ ಪ್ರದೇಶವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಲು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಬಾವಿ ವ್ಯಕ್ತಿಗಳು ಮುಂದಾಗಿದ್ದಾರೆ .
ಕಣ್ಮುಂದೆಯೆ ಒತ್ತುವರಿಯಾಗುತ್ತಿರುವ ಕೆರೆಯನ್ನು ಉಳಿಸಿಕೋಳ್ಳಬೇಕು, ಒತ್ತುವರಿಗೆ ಮುಂದಾದವರ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಕೆರೆ ಪ್ರದೇಶವನ್ನು ರಾಜಕೀಯ ಪ್ರಭಾವಿಗಳಿಗೆ ಒತ್ತುವರಿ ಮಾಡಿಕೊಳ್ಳಲು ಅಧಿಕಾರಿಗಳೆ ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ದೂರಿದರು.
೧೨೫ ವರ್ಷ ಗಳ ಹಿಂದಿನ ಕಾಲದ ದಾಖಲೆಗಳಲ್ಲಿ ಕೆರೆ ಎಂದೆ ನಮೂದಿಸಲಾಗಿದೆ, ಬೆಂಗಳೂರು ಪೂರ್ವ ತಾಲ್ಲೂಕಿನ ತಹಶಿಲ್ದಾರವರಿಗೆ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದರು ಕೆರೆಗೆ ಬೆಲಿ ಹಾಕಿಸುವುದಾಗಿ ಹೇಳಿ ತಕ್ಷಣಕ್ಕೆ ನಮ್ಮನು ಮನವೊಲಿಸಿ ಉಡಾಪೆ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ಗೊಂಡರು.
ಇತ್ತ ಯಾವಬ್ಬ ಕಂದಾಯ ಅಧಿಕಾರಿಗಳು ಬಾರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಿದರು.
ಈ ಕೆರೆಯ ರಕ್ಷಣೆಗಾಗಿ ನೂರಾರು ಸ್ಥಳೀಯರು, ಮಕ್ಕಳು ಸೇರಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.