ರಸ್ತೆ ಅಪಘಾತ..ಬೈಕ್ ಸವಾರ ಸ್ಥಳದಲ್ಲೇ ಸಾವು

185

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಬೆಂಗಳೂರು ರಸ್ತೆ ಹೆದ್ದಾರಿಯ ಹಿರೇ ಪಾಳ್ಯ ಮತ್ತು ಸಂತೇಕಲ್ಲಹಳ್ಳಿ ಗ್ರಾಮಗಳ ನಡುವೆ ಸುಜುಕಿ ಶಿಫ್ಟ್ ಕಾರಿನ ಮುಂದಿನ ಚಕ್ರ ಬ್ಲಾಸ್ಟ್ ಆಗಿ ಪಕ್ಕದಲ್ಲಿ ಹೋಗುತ್ತಿದ್ದ ಪ್ಲಾಟಿನ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮುರಳಿ (26)ಸ್ಥಳದಲ್ಲೇ ಸಾವುನಪ್ಪಿರುವ ಘಟನೆ ನಡೆದಿದೆ.ಮೃತಯುವಕ
ಚಿಂತಾಮಣಿ ನಗರದ ಶಾಂತಿನಗರ ನಿವಾಸಿ ಎಂದು ತಿಳಿದುಬಂದಿದೆ.ಅಮೆಜಾನ್ ಕೊರಿಯರ್ ಬಾಯ್ ಯಾಗಿ ಕೆಲಸ ಮಾಡುತ್ತಿದ್ದ ಎಂದು ಮಾಹಿತಿ ದೊರೆತಿದೆ
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಬೈರಪ್ಪ ರವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೂಂಡಿದ್ದಾರೆ.

ಮೃತ ದೇಹವನ್ನು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.