ಕಾರ್ಮಿಕರನ್ನು ಕೆಲಸದಿಂದ ವಜಾ,ಹೋರಾಟಗಾರರಿಂದ ಪ್ರತಿಭಟನೆ

406

ಮಹದೇವಪುರ: ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಗರಿಗೆ ಮೊದಲ ಆಧ್ಯತೆ ನೀಡಿ ಎಂದು ಕನ್ನಡ ಪರ ಸಂಘಟನೆಗಳು, ಮಾನ್ಯ ಸರ್ಕಾರವು ಹೇಳಿದ ಮಾತಗಳಿಗೆ ವಿರುದವಾಗಿ ಕನ್ನಡ ಹಾಗೂ ಕಾವೇರಿ ನೀರಿನ ವಿಷಯವಾಗಿ ಹೋರಟ ಮಾಡಿದ 4 ಕಾರ್ಮಿಕರನ್ನು ಕೆಲಸದಿಂದ ವಚ್ಚಾ ಮಾಡಿರುವ ಶಕ್ತಿ ಪ್ರಿಸಿಷನ್ ಕಾಂಪೊನೆಟ್ಸ್ ಇಂಡಿಯಾ ಪ್ರೇ.ಲಿ ಖಾಸಗಿ ಕಂಪನಿಯು ಕಾರ್ಖಾನೆಯ ಮಾಲಿಕರು ಕಾರ್ಮಿಕರಿಗೆ ಹೆಚ್ಚು ಅನ್ಯಾಯ ಮಾಡುತ್ತಿರುವುದು ನ್ಯಾಯವಲ್ಲ. ಕೈಗಾರಿಕ ಕಾನೂನು ನೀತಿಯನ್ನು ಉಲ್ಲಂಘಿಸಿ, ವಜಾ ಮಾಡಿರುವ ಸುಮಾರು 10 ವರ್ಷ ಕೆಲಸ ಮಾಡಿದ 4 ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು, ಕಾರ್ಮಿಕರ ಬೇಡಿಕೆಗಳನ್ನು ಹಿಡೇರಿಸಬೇಕೆಂದು ಶಾಂತಿಯುತ ಹೋರಟವನ್ನು ಮಾಡುತ್ತಿದ್ದೇವೆ ಎಂದು ಎ.ಐ.ಟಿ.ಯು.ಸಿ ಅಧ್ಯಕ್ಷರಾದ ಮಾರ್ರಿಲಿಂಗಯ್ಯನವರು ಆಗ್ರಹಿಸಿದರು.