ಮರು ಪರಿಶೀಲನೆಗೆ ಒತ್ತಾಯ..

175

ಬೆಂಗಳೂರು ಗ್ರಾಮಾಂತರ/ಹೊಸಕೋಟೆ:ತಾಲೂಕಿನ ದೇವ ಶೆಟ್ಟಿಹಳ್ಳಿಯ ನಿವಾಸಿ ಮಹೇಶ್ ಕಳೆದ ಎರಡು ತಿಂಗಳ ಇಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಸುತ್ತಲೂ ಅನುಮಾನಗಳು ಆವರಿಸಿಕೊಂಡಿವುದಾಗಿ ಪೋಷಕರು, ಸಂಬಂಧಿಕರು ದೂರಿದರು.ಪೊಲೀಸರು ಮರು ಪರಿಶೀಲನೆಗೆ ಒತ್ತಾಯ ಮಾಡಿದರು.ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.ತಪ್ಪು ಮಾಡಲಿಲ್ಲ ಅನ್ನೋದಾದರೆ ಊರುಬಿಟ್ಟು ಹೋಗಿರುವುದು ಯಾಕೆ ಎಂದು ಪ್ರಶ್ನಿಸಿದರು.ನಮ್ಮ ಮಗ ಆತ್ಮಹತ್ಯೆ ಮಾಡಿಕೊಂಡ ಇಲ್ಲ ಶೇಕಡಾ ನೂರಕ್ಕೂ ನೂರು ಸೊಸೆಯ ಕಡೆಯವರು ಕೊಲೆ ಮಾಡಿದ್ದಾರೆ, ಆತ್ಮಹತ್ಯೆ ಎನ್ನುವದು ಸುಳ್ಳು, ಪೊಲೀಸರು ಮರು ಪರಿಶೀಲನೆ ಮಾಡಿದರೆ ಸತ್ಯಾಂಶ ಹೊರಬರುತ್ತದೆ ಎಂದು ಮಹೇಶ್ ಪೋಷಕರು ಒತ್ತಾಯ ಮಾಡಿದ್ದಾರೆ.ವೈದೇಹಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟನ್ ನಡೆದಿದ್ದು ಆತ್ಮಹತ್ಯೆ ಎಂದೆ ವರದಿ ಬಂದಿರುವುದಾಗಿ ಪೋಲಿಸರು ತಿಳಿಸಿದ್ದಾರೆ. ಜಾಂಭವ ಯುವ ಸೇನೆ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ ಸಾತ್ ನೀಡಿದರು.