ಕಾಮಗಾರಿ ವೇಳೆ ದುರಂತ ಇಬ್ಬರು ಕಾರ್ಮಿಕರ ಮರಣ

338

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ಕೆಆರ್ ಎನ್ ಲೋಕ ಲೇಔಟ್ ಸಮೀಪ ಘಟನೆ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಸಾವು.ಮೂವರ ಸ್ಥಿತಿ ಗಂಭೀರ.ತಡೆಗೋಡೆ ನಿರ್ಮಿಸಲು ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಸಂಭವಿಸಿದ ದುರಂತ.

ಮೃತರಿಬ್ಬರು ಜಾರ್ಖಂಡ್ ಮೂಲದವರೆಂಬ ಮಾಹಿತಿ ರಾಜು ಮತ್ತು ಲಲಿತ್ ಎಂಬುವರು ಸಾವನ್ನಪ್ಪಿದ ದುರ್ದೈವಿಗಳು.ಉಳಿದ ಮೂವರ ಸ್ಥಿತಿ ಗಂಭೀರ ನಗರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆಎಂ. ಹನುಮಂತ ರಾಯಪ್ಪನವರಿಗೆ ಸೇರಿದ ನಿವೇಶನದಲ್ಲಿ ಘಟನೆ. ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿ ವೇಳೆ ಸಂಭವಿಸಿರುವ ದುರಂತ.

ವಿಷಯ ತಿಳಿದು ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆಮಾಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.