“ರಾಯಲ್ ಸರ್ಕಲ್” ವೇಶ್ಯಾವಾಟಿಕೆ…!?

359

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ರಾಯಲ್ ಸರ್ಕಲ್ ಮನೆಯೊಂದರಲ್ಲಿ ನಡೆಯುತ್ತಿರುವ ರಾಯಲ್ ವೇಶ್ಯಾವಾಟಿಕೆ ನಮ್ಮೂರ ಟಿವಿ ವಾಹಿನಿಯ ರಹಸ್ಯ ಕಾರ್ಯಾಚರಣೆ.

ನಗರದಲ್ಲಿ ಹಲವು ಕಡೆ ವೇಶ್ಯಾವಾಟಿಕೆ ಮಾಹಿತಿ ಇದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಪೊಲೀಸರು? ಎಂಬ ಸಾರ್ವಜನಿಕರ ಆರೋಪ.

ಚಿಂತಾಮಣಿ ನಗರಕ್ಕೆ ಹೊರ ರಾಜ್ಯಗಳಿಂದ ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ.

ಚಿಂತಾಮಣಿಯ ನಮ್ಮೂರು ಟಿವಿ ವರದಿಗಾರರಿಗೆ ದೊರೆತ ಖಚಿತ ವೈಶ್ಯಾವಾಟಿಕೆ ಮಾಹಿತಿಯ ಮೇರೆಗೆ ಮನೆಯೊಂದರಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಯನ್ನು ಚುಟುಕು ಕಾರ್ಯಾಚರಣೆ ಮಾಡಿದ ವರದಿಗಾರ ಇಮ್ರಾನ್.

ಮಹಿಳೆಯರನ್ನು ಮನೆ ಕೆಲಸ ಎಂದು ಕರೆತಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ರಾಯಲ್ ಸರ್ಕಲ್ ಬಳಿ ನಡೆಯುತ್ತಿರುವ ವೇಶ್ಯಾವಾಟಿಕೆ ಸುಮಾರು ವರ್ಷಗಳಿಂದ ನಡೆಯುತ್ತಿದ್ದರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಸಾರ್ವಜನಿಕರ ದೂರು.

ಸಾರ್ವಜನಿಕರು ಹಲವಾರು ಬಾರಿ ಠಾಣೆಗೆ ದೂರು ನೀಡಿದರು ಕೊಡ ಯಾವುದೇ ಪ್ರಯೋಜನ ಆಗಿಲ್ಲ ಎಂದು ವಾಹಿನಿಯ ಮೊರೆಹೋದ ಸ್ಥಳೀಯರು.

ಇತ್ತೀಚೆಗೆ ಚಿಂತಾಮಣಿ ನಗರದಲ್ಲಿ ಇಂತಹ ದಂಧೆಗಳು ಹೆಚ್ಚಾಗಿ ಹೆಚ್ಚಾಗಿದ್ದು ಮಾದ್ಯಮಗಳಲ್ಲಿ ಪ್ರಸಾರ ವಾದ ನಂತರವೇ ಎಚ್ಚೆತ್ತು ಕ್ರಮಕ್ಕೆ ಮುಂದಾಗುತ್ತಿರುವ ಅಧಿಕಾರಿಗಳು.ಕಂಡೂ ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆಂಬ ಆರೋಪ ಹೊತ್ತಿರುವ ಪೊಲೀಸರು ಇನ್ನಾದರೂ ಎಚ್ಚೆತ್ತು ವೇಶ್ಯಾವಾಟಿಕೆ ಮುಂತಾದ ದಂದೆಗಳಿಗೆ ಬ್ರೇಕ್ ಹಾಕುತ್ತಾರಾ ? ಎಂದು ಕಾದು ನೋಡಬೇಕಿದೆ.

ನಮ್ಮೂರು ಟಿವಿ ಸುದ್ದಿವಾಹಿನಿಯಲ್ಲಿ ಇದು ಎರಡನೇ ಬಾರಿ ಸುದ್ದಿ ಪ್ರಸಾರ….