ಜೇನು ದಾಳಿ,ಪ್ರವಾಸಿಗ ಸಾವು.

155

ಮಂಡ್ಯ/ಮಳವಳ್ಳಿ: ಪ್ರವಾಸಿತಾಣವಾದ ಮುತ್ತತ್ತಿಗೆ ಬಂದಿದ್ದ ಪ್ರವಾಸಿಗನೊಬ್ಬನ ಮೇಲೆ ಜೇನು ದಾಳಿ ಪರಿಣಾಮ ಪ್ರವಾಸಿಗ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಕುರುಬರಹಳ್ಳಿ ವಾಸವಾಗಿದ್ದ ವೆಂಕಟೇಶ್ (42) ಮೃತಪಟ್ಟ ದುದೈವಿ. ಈತ ಮೂಲತಃ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ವಾಸಿಯಾಗಿದ್ದು, ಬೆಂಗಳೂರು ನಲ್ಲಿ ಕೆಲಸ ನಿರ್ವಹಿಸಿದ್ದ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ 4 ಗಂಟೆಯ ಸಮಯದಲ್ಲಿ ಪ್ರವಾಸಿ ತಾಣವಾದ ಮುತ್ತತ್ತಿಗೆ ತೆರಳಿ ಕಾವೇರಿನದಿ ದಂಡೆಯ ಬಳಿ ಹೋಗಿದ್ದ ಸಂದರ್ಭದಲ್ಲಿ ಜೇನು ದಾಳಿ ನಡೆದಿದ್ದು. ಗಾಯಾಳುವಾಗಿದ್ದ ವೆಂಕಟೇಶ ನನ್ನು ಹಲಗೂರು ಆಸ್ವತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಆಸ್ವತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾಯುವ ಮುನ್ನ ಕಣ್ಣುಗಳನ್ನು ದಾನ ಮಾಡಿರುವ ಬಗ್ಗೆ ಕುಟುಂಬ ಮೂಲಗಳು ತಿಳಿಸಿದೆ.

ಈ ಸಂಬಂದ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.