ಚಿಣ್ಣರ ಚಿಲುಮೆ ರಂಗ ತರಬೇತಿ ಶಿಬಿರ…

442

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ:ಶಾಲಾ ವಿಧ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು  ತರಬೇತಿಯಲ್ಲಿ ಅಭಿನಯವನ್ನು ಕಲಿತು ಹಲವಾರು ರೀತಿಯ ಕಲಾ ಪ್ರತಿಭೆಗಳ ಜೊತೆಗೆ ಜಾನಪದ ಕಲೆಗಳನ್ನು ಕಲಿತು ಕಲೆಯನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಗ್ರಾಮಕ್ಕೂ ಮತ್ತು ಶಾಲೆಗೂ ಕೀರ್ತಿ ತರುವಂತ ಕೆಲಸ ಮಾಡಬೇಕು ಎಂದು ಚಿಣ್ಣರ ಚಿಲುಮೆ ರಂಗಬೇತಿ ಶಿಬಿರವನ್ನು ನಗಾರಿಯನ್ನು ಭಾರಿಸುವ ಮೂಲಕ ಚೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.

ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿಣ್ಣರ ಚಿಲುಮೆ ರಂಗ ತರಬೇತಿ ಶಿಬಿರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಈ ಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ (ರಿ) ವರದನಾಯಕನಹಳ್ಳಿ, ಅಬ್ಬೂಡು ಅಂಚೆ, ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ  ಇವರ ವತಿಯಿಂದ ನಡೆಯಿತು.

ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾಗುವಂತ ನಾಟಕಗಳಲ್ಲಿ ಭಾಗವಹಿಸಿ ಪಠೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಆಗ ವಿದ್ಯಾರ್ಥಿಗಳು ಸಹ  ಶಿಕ್ಷಕರು ಹೇಳುವಂತ ಪಾಠಗಳನ್ನು ಆಸಕ್ತಿಯಿಂದ ಕೇಳಲು ಸಹಕಾರಿಯಾಗುತ್ತದೆ. ಜ್ಙಾನಪ ಶಕ್ತಿಯು ವೃದ್ದಿಸಿ ಕ್ರೀಯಾ ಶೀಲತೆ ಹಾಗೂ ಉತ್ತಮ ವ್ಯಕ್ತಿತ್ವ ವಿಕಾಸಕ್ಕೆ ಬಹು ಮುಖ್ಯವಾಗಿದೆ ರಂಗ ಚಟುವಟಿಕೆ  ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ರಂಗ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು
ಎಂದು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಚೀಮಂಗಲ ಸರ್ಕಾರಿ ಪ್ರೌಢ ಶಾಲೆ
ಮುಖ್ಯ ಶಿಕ್ಷಕ ಎಸ್. ಶಿವಶಂಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಚೀಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಎಂ ನಾರಾಯಣಸ್ವಾಮಿ, ನಾಟಕ ನಿರ್ದೇಶಕಿ ರತ್ನ ಸಕಲೇಶ್ವರ್,ತಾಲ್ಲೂಕು ಪ್ರಾರ್ಥಮಿಕ ಶಿಕ್ಷಕರ ಸಂಘದ ಅದ್ಯಕ್ಷ ಹಾಗೂ ಚೀಮಂಗಲ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಮುಖ್ಯ ಶಿಕ್ಷಕ ಎಂ. ಮುನಿರಾಜು, ಈ ಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ ಅದ್ಯಕ್ಷ ತಿರುಮಲ ಪ್ರಕಾಶ್, ಶಾಲಾ ಶಿಕ್ಷಕಿ ಸವಿತಾ, ಶಿಕ್ಷಕರಾದ ಡಾ: ಎಂ ಶಿವಕುಮಾರ್, ಟಿ.ಇ ಶ್ರೀನಿವಾಸ್, ಶೇದ್ ಸೈಯದ್ ಷರ್ಪದ್ದೀನ್ ಪಾಷ, ಚಿತ್ರಕಲೆ ಅಕಾಡೆಮಿ ಶಿವರಾಜು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.