ಜನತೆಗೆ ಕೃತಜ್ಞತೆ… ಸಚಿವರಿಗೆ ಸನ್ಮಾನ…

290

ಚಾಮರಾಜನಗರ: ಯಾವುದೇ ಶಾಸಕ ಚಾಮರಾಜನಗರ ದಲ್ಲಿ ಮೂರು ಬಾರಿ ಗೆದ್ದಿರುವ ಇತಿಹಾಸವೇ ಇಲ್ಲ.

ಪುಟ್ಟರಂಗಶೆಟ್ಟಿ ಮೂರು ಬಾರಿ ಗೆಲ್ಲುವುದರ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಗೆಲ್ಲುವುದೇ ಹೆಚ್ಚು.

ಪುಟ್ಟರಂಗಶೆಟ್ಟಿ ರವರು ಹ್ಯಾಟ್ರಿಕ್ ಸಾಧನೆ ಮಾಡುವುದರ ಜೊತೆಗೆ, ಮಂತ್ರಿಸ್ಥಾನವನ್ನ ಪಡೆದುಕೊಂಡಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಈ ಸಾಧನೆ ಮಾಡಿದ ಮೆಚ್ಚುಗೆ ಪುಟ್ಟರಂಗಶೆಟ್ಟಿ ರವರಿಗೆ ಸಲ್ಲುತ್ತದೆ.

ಹಿಂದುಳಿದ ಸಮಾಜದ ಖಾತೆ ಸಿಕ್ಕಿರುವುದು, ಇನ್ನೂ ಸಂತೋಷ, ಯಾಕೆಂದ್ರೆ ಅವರು ಕೂಡ ಹಿಂದುಳಿದ ವರ್ಗದಿಂದ ಬಂದವರು.

ಮಂತ್ರಿಯಾಗುದು ಸುಲಭದ ಮಾತಲ್ಲ, ಆಸ್ಥಾನದಲ್ಲಿ ಇದ್ದು ಹಿಂದುಳಿದ ಸಮುದಾಯದ ಏಳಿಗೆಗೆ ಶ್ರಮಿಸುವುದು ಬಹಳ ಕಷ್ಠ.

ಹಾಗಾಗಿ ಪುಟ್ಟರಂಗಶೆಟ್ಟಿ ರವರು ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿ ಮಾಡುತ್ತಾರೆ ಅನ್ನೋದು ಸ್ಪಷ್ಟ.

ಕಾಂಗ್ರೆಸ್ ಸರ್ಕಾರ ಒಂದು ಕಳಂಕಕ್ಕೂ ಎಡೆ ಮಾಡಿಕೊಡದೆ, ಐದು ವರ್ಷ ನಿಷ್ಕಳಂಕ ಆಳ್ವಿಕೆ ಮಾಡಿದ್ದೇವೆ.

ಆದ್ರೆ ನಿರೀಕ್ಷಿತ ಮಟ್ಟದಲ್ಲಿ ಬಹುಮತ ಪಡಿಯೋದಕ್ಕೆ ಆಗಲಿಲ್ಲ.

ನಮ್ಮ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ ಎಂದು ಹೆಮ್ಮೆಯಿಂದ ಹೇಳ್ಕೊತಿದ್ವಿ, ಆದ್ರೆ ಈ ಬಾರಿ ಅದು ಬೇಸರ ತರುವಂತ್ತಾಯ್ತು.

ಜಿಲ್ಲೆನಲ್ಲಿ ಮತಗಳು ನಮಗೆ ಹೆಚ್ಚು ಬಂತೇ ವಿನಃ, ಸ್ಥಾನಗಳು ಹೆಚ್ಚು ಬರಲಿಲ್ಲ.

ಯಾಕೆಂದ್ರೆ ಜಿಲ್ಲೆಗೆ ಸಿದ್ದರಾಮಯ್ಯನ ಸರ್ಕಾರದಲ್ಲಿ ಕೊಟ್ಟಂತಹ ಅನುದಾನ, ಯಾವ ಸರ್ಕಾರಗಳೂ ಕೊಟ್ಟಿಲ್ಲ.

ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಆದ್ರೆ ಅವರು ಒಂದು ಜನಪರ ಕೆಲಸವನ್ನ ಮಾಡಿಲ್ಲ.

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದ್ರೂ ದೇಶದಲ್ಲಿ ಬೆಲೆ ಕಡಿಮೆ ಮಾಡೋಕೆ ಆಗಿಲ್ಲ.

ವಿದೇಶಿ ಪ್ರವಾಸ ಮಾಡದ್ರಲ್ಲೇ ಕಾಲ ಕಳೆದಿದ್ದಾರೆ ನರೇಂದ್ರ ಮೋದಿಯವರು. ಜನಪರ ಕೆಲಸಗಳನ್ನ ಮಾಡುವಲ್ಲಿ ವಿಫಲರಾಗಿದ್ದಾರೆ…
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕೃತಜ್ಞತಾ ಸಭೆಯಲ್ಲಿ ದ್ರುವನಾರಾಯಣ್ ಅಭಿಮತ ವ್ಯಕತಪಡಿಸಿದರು..