ಮುಂಗಾರು ಉತ್ಸವ…

241

ರಾಯಚೂರು: ಕಾರ ಹುಣ್ಣಿಮೆ ಪ್ರಯುಕ್ತ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮೂರು ದಿನಗಳ ಕಾಲ‌ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರಿನ ಹಬ್ಬ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ನಗರದ ಗಂಜ್ ನಡೆಯುವ ಕಾರ್ಯಕ್ರಮಕ್ಕೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ವೆಂಕಟರಾವ್ ನಾಡಗೌಡ ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಯಿತು.

ಸೋಮವಾರ ಪೇಟೆಯ ಶ್ರೀ ಅಭಿನವ ರಾಯಚೋಟಿ ಶಿವಚಾರ್ಯ, ಮುನ್ನೂರು ಕಾಪು ಸಮಾಜದ ಶ್ರೀಗಳು, ಶಾಸಕರಾದ ಡಾ.ಶಿವರಾಜ್ ಪಾಟೀಲ್, ರಾಜಾ ವೆಂಕಟಪ್ಪ ನಾಯಕ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುನ್ನೂರು ಕಾಪು ಸಮಾಜದ ಮುಂಖಡರು ಭಾಗವಹಿಸಿದ್ರು.

ಮೊದಲ ದಿನವಾದ ಇಂದು ಬೆಳಿಗ್ಗೆ ಸೋಮವಾರಪೇಟೆ ಶ್ರೀಗಳು ಎತ್ತುಗಳ ಭಾರ ಎಳೆಯುವ ಸ್ಪರ್ಧೆ ಚಾಲನೆ ನೀಡಿದ್ರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ವೆಂಕಟರಾವ್ ನಾಡಗೌಡ ಎತ್ತುಗಳು ವಿಶೇಷ ಪೂಜೆ ಸಲ್ಲಿಸಿದ್ರು.