ಸೌಲಭ್ಯ ವಂಚಿತ ಹೆದ್ದಾರಿ ಕಾಮಗಾರಿ ವಿರುದ್ದ ಸಾರ್ವಜನಿಕರ ಆಕ್ರೋಶ.

169

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಎಂ ಜಿ ರಸ್ತೆಯಲ್ಲಿ ಹಾದು ಹೋಗುವ 234 ಹೈವೇಯಲ್ಲಿ ಸಾರ್ವಜನಿಕರಿಗೆ ಅವಶ್ಯಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಕಾಮಗಾರಿಗಳನ್ನು ಮಾಡುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.

ಅತಿ ಹೆಚ್ಚು ವಾಹನಗಳ ದಟ್ಟಣೆ ಮತ್ತು ಜನ ಸಂಚಾರ ಇರುವುದು ಎಂ ಜಿ ರಸ್ತೆಯಲ್ಲಿ ಈ ರಸ್ತೆಯನ್ನು ಜೋಡಿ ರಸ್ತೆಯನ್ನಾಗಿ ಮಾಡಿದರೂ ನಗರದ ಹೃದಯ ಭಾಗವಾದ ಪಿಸಿಆರ್ ವೃತ್ತ ದಿಂದ ಗಾಯತ್ರಿ ಸ್ವೀಟ್ ಅಂಗಡಿಯವರೆಗೂ ಜೋಡಿ ರಸ್ತೆ ಯಾಗಿ ಪರಿವರ್ತನೆ ಮಾಡದೇ ಇರುವ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ.

ಈ ರಸ್ತೆಯ ಎರಡು ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಚರಂಡಿಗಳ ನಿರ್ಮಾಣ ಮತ್ತು ರಸ್ತೆಯನ್ನು ಅಗಲೀಕರಣ ಮಾಡದೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಚರಂಡಿ ನಿರ್ಮಾಣ ಮಾಡದೇ ಇದ್ದರೆ ಮಳೆ ನೀರು ರಸ್ತೆಯ ಮೇಲೆ ಹಾದು ಹೋಗಿ ರಸ್ತೆ ಹಾಳಾಗುವುದಲ್ಲದೆ ಮಳೆ ನೀರಿನಲ್ಲಿ ಪಾದಚಾರಿಗಳು ವಾಹನ ಸವಾರರು ಹೇಗೆ ಸಂಚರಿಸುವುದು ಎಂದು ಸಾರ್ವಜನಿಕರು ಪ್ರಶ್ನಿಸಿದರು.

ರಾತ್ರಿ ವೇಳೆ ಜೆಸಿಬಿ ಯಂತ್ರದಲ್ಲಿ ಕಾಮಗಾರಿಯನ್ನು ಕೈಗೆತ್ತಿಗೊಂಡು ಪರಿಣಾಮ ವಿದ್ಯುತ್, ನೀರು, ದೂರವಾಣಿ ಮತ್ತು ಒಳಚರಂಡಿ ಸಂಪರ್ಕಗಳು ಜೆಇಸಿಬ‌ ಯಂತ್ರಕ್ಕೆ ಸಿಲುಕಿ ನಾಶವಾಗಿ ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೂ ಸಾವಿರಾರು ರೂ ನಷ್ಟವಾಗಿದೆ.

ವಿದ್ಯುತ್ ಕಂಬಗಳ ಸ್ಥಳಾಂತರ ಚರಂಡಿಗಳ ನಿರ್ಮಾಣ ಮತ್ತು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅವಘಡ ನಡೆಯದಂತೆ ಮುಂಜಾಗ್ರತೆ ಯ ನಾಮಫಲಕಗಳು ಅಳವಡಿಸದೆ ಇದ್ದರೆ ರಸ್ತೆ ಕಾಮಗಾರಿಗೆ ತಡೆ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದರು ನೀಡಿದರು.

ಈ ಸಂದರ್ಭದಲ್ಲಿ ಮುಖಂಡ ಲೋಕೇಶ್, ಪಾಟೀಲ್, ಸುಭಾಷ್ , ಜಗನ್ನಾಥ್ ,ಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.