ಬ್ಯಾಂಕ್‌ನವರ ಕಿರುಕುಳ ತಾಳದೆ ಬಾವಿಗೆ ಬಿದ್ದು ರೈತ ಆತ್ಮಹತ್ಯೆ…

207

ಬೀದರ್/ಬಸವಕಲ್ಯಾಣ: ಸಾಲದ ಸುಳಿಗೆ ಸಿಲುಕಿದ ರೈತರ ಸಾಲ ಮನ್ನಾಮಾಡುವ ಮೂಲಕ ರೈತರನ್ನು ಋಣಮುಕ್ತರನ್ನಾಗಿಸುಲು ಸರ್ಕಾರ ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿಯೇ ಸಾಲ ತೀರಿಸದ ಕಾರಣ ಬ್ಯಾಂಕ್‌ನವರ ಕಾಟ ತಾಳದೆ ರೈತನ್ನೊಬ್ಬ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ..
ಘಟನೆ ತಾಲೂಕಿನ ನಿರಗೂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೆಂಕಟ ಭೀಮಣ್ಣ ಕಾಳೆಖಂಡು(೪೫) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ರೈತನಿಗೆ ಒಟ್ಟು ೧೪ ಎಕ್ರೆ ಜಮೀನು ಇದ್ದು, ನಾಲ್ವರು ಪುತ್ರರಿದ್ದಾರೆ.
ಕಳೆದ ಮೂರು ವರ್ಷದ ಹಿಂದೆ ಇಲ್ಲಿಯ ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ೩ ಲಕ್ಷ ಹಾಗೂ ಎಸ್‌ಬಿಐ ಬ್ಯಾಂಕ್‌ನಲ್ಲಿ ೭೫ ಸಾವಿರ ಸಾಲ ಮಾಡಿದ್ದಾನೆ. ಬ್ಯಾಂಕ್ ಅಲ್ಲದೆ ಸ್ಥಳೀಯ ಮಟ್ಟದ ಸಂಘ-ಸಂಸ್ಥೆಗಳಲ್ಲಿಯೂ ಸಾಲವಿದ್ದು ಬ್ಯಾಂಕ್ ಸೇರಿದಂತೆ ಒಟ್ಟು ೬ ಲಕ್ಷಕ್ಕೂ ಅಧಿಕ ಸಾಲವಿದೆ. ಕಳೆದ ಮೂರು ವರ್ಷದಿಂದ ಸರಿಯಾದ ಪ್ರಮಾಣದಲ್ಲಿ ಬೆಳೆ ಬೆಳೆಯದ ಕಾರಣ ಸಾಲ ತೀರಿಸಲಾಗಿಲ್ಲ ಎನ್ನಲಾಗಿದೆ.
ಸಾವಿಗೆ ನೋಟಿಸ್ ಕಾರಣ: ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ಇರುವ ೩ ಲಕ್ಷ ಸಾಲಕ್ಕೆ ಸಂಬಂಧಿಸಿದಂತೆ ಸಾಲ ವಸೂಲಿ ಮಾಡಲು ಬ್ಯಾಂಕ್ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ತೆರಳಿ, ರೈತನಿಗೆ ನೋಟಿಸ್ ನೀಡಿದ್ದು, ನೋಟಿಸನ್ ಪ್ರತಿ ಮೇಲೆ ಸಹಿ ಮಾಡು ಎಂದು ಒತ್ತಾಯ ಮಾಡಿದ್ದಾರೆ.
ನೀವು ಕೊಟ್ಟಿರುವ ನೋಟಿಸನಲ್ಲಿ ಸಾಲದ ಪ್ರಮಾಣ ಎಷ್ಟು ಎನ್ನುವ ಬಗ್ಗೆ ನಮೋದಿಸಿಲ್ಲ. ನಿಮ್ಮ ನೋಟಿಸ್ ಇಂಗ್ಲಿಸ್‌ನಲ್ಲಿ ಇರುವ ಕಾರಣ ಇದರಲ್ಲಿ ಏನು ಬರೆಯಲಾಗಿದೆ ಎನ್ನುವ ಬಗ್ಗೆ ನಮಗೆ ಅರ್ಥವಾಗುವುದಿಲ್ಲ. ಕೆಲ ದಿನಗಳ ಹಿಂದೇಯೂ ಸಹ ಇದೇ ರೀತಿ ನೋಟಿಸ್ ಕೋಟ್ಟು ಸಹಿ ಮಾಡಿಸಿಕೊಂಡು ಹೋಗಿದ್ದಿರಿ. ಇವಾಗ ಮತ್ತೆ ಬಂದು ಸಹಿ ಮಾಡುವಂತೆ ಒತ್ತಾಯಿಸುತ್ತಿರುವದು ಸರಿಯಲ್ಲ. ಸೋಮವಾರ ನಾವೇ ಖೂದ್ದಾಗಿ ನಿಮ್ಮ ಬ್ಯಾಂಕ್‌ಗೆ ಬರುತ್ತೆವೆ. ಏನಿದ್ದರು ಅಲ್ಲಿಯೇ ಮಾತಾಡೋಣ ಎಂದು ಬ್ಯಾಂಕ್‌ನವರಿಗೆ ಹೇಳಿ ವಾಪಾಸ ಕಳಿಸಲಾಗಿತ್ತು.
ನಂತರ ನಮ್ಮ ತಂದೆ ಮನೆಗೆ ಬಾರದೆ ನೇರವಾಗಿ ಜಮೀನಿಗೆ ತೆರಳಿ ಬಾವಿಗೆ ಜೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪುತ್ರ ರಾಜಕುಮಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಈ ಕುರಿತು ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್, ಪಿಎಸ್‌ಐ ವೀರಣ್ಣ ಮಗಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.