ವಿಶ್ವ ಹಾವುಗಳ ಸಂರಕ್ಷಣಾ ದಿನಾಚರಣೆ

262

ಬೆಂಗಳೂರು/ಮಹದೇವಪುರ: ಹಾವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಿಡಿತ ಫೌಂಡೇಷನ್ ಅಧ್ಯಕ್ಷ ಪರಿಸರ ಮಂಜುನಾಥ್ ತಿಳಿಸಿದರು.
ಮಿಡಿತ ಫೌಂಡೇಷನ್’ವತಿಯಿಂದ ವಿಶ್ವ ಹಾವುಗಳ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ “ಹಾವುಗಳೊಂದಿಗೆ ವಿದ್ಯಾರ್ಥಿಗಳು”  ಎಂಬ ಶಿಬಿರವನ್ನು ವೈಟ್ ಫೀಲ್ಡ್’ನ ಇಮ್ಮಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳೊಂದಿಗೆ  ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು,  ಜುಲೈ 16ರಂದು ವರ್ಲ್ಡ್‌ ಸ್ನೇಕ್‌ ಡೇ ಎಂದು ಎಲ್ಲೆಡೆ ಆಚರಿಸಲಾಗುತ್ತದೆ, ‌ ಹಾವಿನ ಕುರಿತಾಗಿ ಜನರಲ್ಲಿರುವ ಅನಗತ್ಯ ಭಯವನ್ನು ಹೋಗಲಾಡಿಸಿ, ಹಾವುಗಳ ಮಹತ್ವ, ಹಾವುಗಳ ಉಳಿವಿಗಾಗಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಈ ದಿನ ಮಾಡಲಾಗುತ್ತದೆ. ಅಮೆರಿಕದಲ್ಲಿ 1967 ನೇ ಇಸವಿಯಲ್ಲಿ ಸ್ನೇಕ್‌ ಫಾರ್ಮ್‌ ಎಂಬ ಸಂಸ್ಥೆ ಇಂಥದ್ದೊಂದು ದಿನಾಚರಣೆಯನ್ನು ಮೊದಲ ಬಾರಿಗೆ ಆಚರಿಸಿತು. ನಂತರ‌‌ ಪ್ರಪಂಚದ ನಾನಾ ಭಾಗಗಳಲ್ಲಿ ವಿಶ್ವ ಹಾವುಗಳ ದಿನಾಚರಣೆ ಅಂಗವಾಗಿ ಹಾವುಗಳ ಕಾರ್ಯಕ್ರಮಗಳನ್ನು ಮಾಡುತ್ತಾರೆ,  ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಮುಖ್ಯಾವಾದದು, ಹಾವುಗಳ ಬಗ್ಗೆ ಮೂಡ ನಂಬಿಕೆಕೆಗಳು ಬೇಡ, ಹಾವುಗಳು ಸಾವಿರಾರು ಇಲಿ ಮತ್ತು ಕಪ್ಪೆಗಳನ್ನು ತಿಂದು ರೈತನಿಗೆ ಸಹಕಾರಿಯಾಗಿರುವ ಮಿತ್ರ, ಹಾವುಗಳಿಂದ ನಾನಾ ಬಗೆಯ ಉಪಯೋಗಗಳಿದ್ದು ಹಾವುಗಳನ್ನು ನಾವು ರಕ್ಷಿಸಬೇಕು, ಇದೇ ವರ್ಷದಲ್ಲಿ ಹಾವುಗಳ ಬಗ್ಗೆ ಮಾಹಿತಿ ಇರುವ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದೆ ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಹೆಚ್ಚಿನ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು ‌

ಉರಗ ಸಂರಕ್ಷಕರು, ಬಿಬಿಎಂಬಿ ಅರಣ್ಯ ಘಟಕದ ಸ್ವಯಂ ಸೇವಕರಾದ
ಸ್ನೇಕ್ ಮೋಹನ್ ಮಾತನಾಡಿ, ಹಾವುಗಳ ಕಚ್ಚಿದಾಗ ಮಾಡಬೇಕಾದ ಪ್ರಥಮಾ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಿದರು ಹಾವು ಕಚ್ಚಿದಾಗ ಸಮಾಧಾನ ಶಾಂತಿಯಿಂದ ಇರಬೇಕು, ಕಚ್ಚಿದ ಭಾಗವನ್ನು ನೀರಿನಿಂದ ತೊಳೆದು, ಶುದ್ದ ಬಟ್ಟೆಯಿಂದ ಒಂದು ಬೆರಳು ಗ್ಯಾಪ್ ಇರುವಂತೆ ಕಟ್ಟಬೇಕು, ನಂತರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು, ಯಾವುದೇ ಮಂತ್ರತಂತ್ರಗಳಿಗೆ ಮಾರುಹೋಗಬಾರದು ಎಂದು ತಿಳಿಸಿದರು. ಜೊತೆಗೆ ಅರಣ್ಯ ಕಾಯ್ದೆ,  ಹಾವುಗಳ ರಕ್ಷಣೆಗಾಗಿ ಇರುವ ಕಾನೂನು ಕಾಯ್ದೆಗಳ ಬಗ್ಗೆ ಮಕ್ಕಳಿಗೆ ಪ್ರಯೋಗಿಗವಾಗಿ ತಿಳಿಸಿ
ಹಾವುಗಳನ್ನು ಕೊಲ್ಲುವುದು ಅಪರಾಧ, ಹಾವುಗಳನ್ನು ರಕ್ಷಿಸಿ ಉಳಿಸಬೇಕು ಎಂದು ಹೇಳಿದರು .

ಉರಗ ರಕ್ಷಕ  ಯಶಸ್ಸ್ ಸಿಂಹಾದ್ರಿರವರಿಂದ ಶಾಲಾ ಮಕ್ಕಳಿಗೆ ವಿಷ ಹಾಗೂ ವಿಷ ರಹಿತ ಹಾವುಗಳ ಪರಿಚಯ,‌‌ ಹಾವುಗಳ ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸಾ ಕ್ರಮಗಳ ತರಬೇತಿ, ಹಾವುಗಳ ರಕ್ಷಣೆಗಿರುವ ಕಾನೂನು ಕಾಯ್ದೆ ಬಗ್ಗೆ, ಹಾವುಗಳ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸಿದರು. ಮಕ್ಕಳು ಪ್ರಾಜೆಕ್ಟ್‌ರ್ ಮೂಲಕ ಹಾವುಗಳ ಚಲನಚಿತ್ರ ಪ್ರದೇಶನ, ಹಾವುಗಳ ಚಿತ್ರಗಳು ತೋರಿಸಿ ಹಾವುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಹಾವುಗಳು ಹಾಲು ಕುಡಿಯುವುದಿಲ್ಲ, ನಾಗಮಣಿ, ಪುರಾಣಗಳಲ್ಲಿ ಹಾವುಗಳ ಕುರಿತಾದ ಹಲವಾರು ರೋಚಕ ಕಥೆಗಳಿವೆ,  ಹಾವುಗಳಿಗೆ ಅತೀಂದ್ರಿಯ ಶಕ್ತಿಗಳಿವೆ, ಅವುಗಳದ್ದೇ ಆದ ಒಂದು ಲೋಕವಿದೆ, ಹಾವಿನ ದ್ವೇಷ ಹನ್ನೆರಡು ವರ್ಷಗಳಿರುತ್ತವೆ ಎಂಬ ಇತ್ಯಾದಿ ಮಾತುಗಳು ಈ ಜೀವಿಯ ಕುರಿತಾಗಿ ಒಂದು ರೀತಿಯ ಕುತೂಹಲವನ್ನು ಕೆರಳಿಸಿವೆ, ಏಳು ಸರ್ಪ ಹಾವುಗಳು ಇರುವ ಉದಾಹರಣೆಗಳಿಲ್ಲ ,‌ ಹಾವುಗಳು ಒಂದು ಜೀವಿ ಅದನ್ನು ಕೊಳುವುದು ಹಿಡಿದು ಹಿಂಸಿಸುವುದು ಸರಿಯಲ್ಲ, ಹಾವುಗಳನ್ನು ಉಳಿಸಿ ಪರಿಸರ ರಕ್ಷಿಸಿ ಎಂದು ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಕರಾದ ಸಿಂಹಾದ್ರಿ, ಕನ್ನಡ ಸಾಹಿತ್ಯ ಪರಿಷತ್ತು ಕ್ಷೇತ್ರಾಧ್ಯಕ್ಷರಾದ ಡಾ.ಅಜಿತ್ ಕುಮಾರ್,ಕ.ಸಾ.ಪ‌ ಬೆಳ್ಳಂದೂರು ವಾರ್ಡ್ ಅಧ್ಯಕ್ಷ ನಂದ ಕುಮಾರ್, ಕ.ಸಾ.ಪ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರುಗಳು, ಮಿಡಿತ ಫೌಂಡೇಷನ್ ಸಂಸ್ಥೆಯ ಹೇಮಾಶ್ರೀ, ಮಮತ, ಶ್ರೀನಿವಾಸಲು, ಲಕ್ಷ್ಮೀನಾರಾಯಣ್,ರಾಜಾಶೇಖರ್, ಮಂಜುಳಾ, ಲಾವಣ್ಯ, ಹತ್ತಾರು ಶಾಲಾ ಮಕ್ಕಳು,  ಶಿಕ್ಷಕ ವೃಂದದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.