ಶಾಸಕರಿಂದ ಕೆರೆಗಳಿಗೆ ಭಾಗಿನ ಅರ್ಪಣೆ

147

ಮಂಡ್ಯ/ಮಳವಳ್ಳಿ: ಕೆಆರ್ ಎಸ್ ಭರ್ತಿ ಯಾದ ಹಿನ್ನಲೆ ತಾಲ್ಲೂಕಿನ ಎಲ್ಲಾ ಕೆರೆಗಳು ಭರ್ತಿ ಯಾಗಿದ್ದ ಹಿನ್ನಲೆಯಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರು ಕೆರೆಗಳ ಭಾಗಿನ ಹಾಗೂ ನಾಲೆ ವೀಕ್ಷಣೆ ಮಾಡಿದರು. ತಾಲ್ಲೂಕಿನ ಮಳವಳ್ಳಿ ದೊಡ್ಡ ಕೆರೆ. ಮಿಕ್ಕರೆ, ರಾಮಂದೂರು, ಮಾರ್ಕಾಲು, ಕಲ್ಕುಣಿ, ಸಂಶೆಟ್ಟಿಪುರ ಕೆರೆಗಳಿಗೆ ಭಾಗಿನ ಅರ್ಪಣೆ ಮಾಡಲಾಯಿತು. ಇದಲ್ಲದೆ ಹೆಬ್ಬಕವಾಡಿ ಬಳಿರುವಿರುವ ಸುತ್ತಕಟ್ಟೆ, 14ನೇ ಉಪವಿಭಾಗ ತುರುಗನೂರು ನಾಲಾ ವೀಕ್ಷಣೆ ಮಾಡಿದರು. ನಂತರ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ, ರಾಜ್ಯದಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಯಾದ ಮೇಲೆ ಎಲ್ಲೆಡೆ ಮಳೆಯಾಗುತ್ತಿದೆ. ಇದರಿಂದ ಜಲಾಶಯಗಳು ಭರ್ತಿಯಾಗಿದ್ದು ಇದೇ 20 ರಂದು ಮುಖ್ಯಮಂತ್ರಿ ಗಳು ಕೆಆರ್ ಎಸ್ ಗೆ ಭಾಗಿನ ಅರ್ಪಣೆ ಮಾಡಲಿದ್ದು. ಇಂದು ನಾವು ಸಹ ಕೆಆರ್ ಎಸ್ ಅಣೆಕಟ್ಟಿನ ಕೊನೆ ಭಾಗವಾಗದ ನಮ್ಮ ತಾಲ್ಲೂಕಿಗೂ ನೀರು ಹರಿದು ಬರುತ್ತಿದ್ದು, ಸಧ್ಯ ದಲ್ಲೆ ಎಲ್ಲಾ ಕೆರೆಕಟ್ಟೆಗಳು ಭರ್ತಿಯಾಗಲಿದ್ದು, ಜೊತೆಗೆ ನಾಲೆಗಳ ಮೂಲಕ ಈ ಭಾರೀ ರೈತರು ಎದುರು ನೋಡುತ್ತೀರುವ ಜಮೀನಿಗೆ ನೀರು 20 ರಿಂದ ಹರಿದು ಬರಲಿದೆ.. ರೈತರು ಕಂಗಾಲಾಗದೆ ಈ ಭಾರಿ ಬೆಳೆಗೆ ನೀರು ಬರುವುದು ನಿಶ್ಚಿತ ಎಂದರು.

ಕಾರ್ಯಕ್ರಮ ದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಮಾಜಿ ತಾ.ಪಂ ಸದಸ್ಯ ಪ್ರಕಾಶ, ಜೆಡಿಎಸ್ ಪಕ್ಷ ತಾಲ್ಲೂಕು ಅಧ್ಯಕ್ಷ ರವಿ, ಜಯರಾಜು, ವಡ್ಡರಹಳ್ಳಿಸಿದ್ದರಾಜು, ಕಲ್ಕುಣಿ ಆನಂದ್, ಸುಹಾಸ್ ಮಹದೇವಯ್ಯ, ನಂಜುಂಡಸ್ವಾಮಿ, ಕಂಬರಾಜು ಸೇರಿದಂತೆ ಮತ್ತಿತ್ತರರು ಇದ್ದರು