ಪಂಚಾಯ್ತಿ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

209

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ಅರಳುಮಲ್ಲಿಗೆ ಪಂಚಾಯತಿ ಕಚೇರಿಯಲ್ಲಿ ಅಧ್ಯಕ್ಷೆ ಪಾರ್ವತಮ್ಮರನ್ನು ಜಾತಿ ನಿಂದನೆ ಮಾಡಿ ಅಧಿಕಾರ ಪದಗ್ರಹಣಕ್ಕೆ ಅಡಚಣೆ ಮಾಡಿದ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ನೂತನ ಅಧ್ಯರಾಗಿ ಆಯ್ಕೆಯಾಗಿದ್ದ ಪಂಚಾಯ್ತಿ ವ್ಯಾಪ್ತಿಯ ಕರೇನಹಳ್ಳಿ ಬಿಜೆಪಿ ಸದಸ್ಯೆ ಪಾರ್ವತಮ್ಮ ಇಂದು ಅಧಿಕಾರ ಪದಗ್ರಹಣ ಮಾಡುವ ಸಮಯದಲ್ಲಿ ಅಭಿನಂದಿಸಲು ಬಂದಿದ್ದ ಬಿಜೆಪಿ ಪಕ್ಷದ ಮುಖಂಡರ ಸಮ್ಮುಖದಲ್ಲೆ ಅಧ್ಯಕ್ಷೆ ಪಾರ್ವತಮ್ಮರನ್ನು ಅವಾಚ್ಯವಾಗಿ ನಿಂದಿಸಿ ಅದ್ಯಾವ ರೀತಿ ಆಡಳಿತ ನಡೆಸುತ್ತೀಯಾ ನೋಡೆ ಬಿಡೋಣ ಎಂದು ಬೆದರಿಕೆ ಹಾಕಿದ ಕಾಂಗ್ರೆಸ್ ಸದಸ್ಯೆ ಲತಾರವರ ಪತಿ ವೆಂಕಟೇಶ(ಜ್ಯೋತಿ) ಎಂಬ ಕಿಡಿಗೇಡಿ ದುಂಡಾವರ್ತನೆ ಮೆರೆದಿದ್ದಾನೆ.

ಅಧಿಕಾರ ಪದಗ್ರಹಣಕ್ಕೆ ಅಡ್ಡಿ ಪಡೆಸಿದ್ದಲ್ಲದೆ ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ಪಂಚಾಯ್ತಿ ಆಪೀಸ್ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಆರೋಪಿ ವೆಂಕಟೇಶನನ್ನು ಈಬಕೂಡಲೇ ಬಂದಿಸ ಬೇಕೆಂದು ಒತ್ತಾಯಿಸಿದ್ದಾರೆ.

ಬೆದರಿಕೆ ಹಾಕಿದ್ದಲ್ಲದೆ,ಜಾತಿ ನಿಂದನೆ ಮಾಡಿ ನಿಮಗೆಲ್ಲಾ ಅಧಿಕಾರ ಬೇಕಾ…?ಎಂದು ಹೀಯಾಲಿಸಿ ಜಾತಿಯನ್ನೂ ನಿಂದಿಸಿದ್ದಾರೆ ಎಂಬ ಆರೋಪಿಸಿ ಅಧ್ಯಕ್ಷೆ ಪಾರ್ವತಮ್ಮ ಗ್ರಾಮಾಂತ ಠಾಣೆ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಬಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಶಿವಶಂಕರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್, ನಗರಸಭಾ ಮಾಜಿ ಅಧ್ಯಕ್ಷ ಮುದ್ದಪ್ಪ,ಸದಸ್ಯ ಕಂಬಿ ನಂಜಪ್ಪ, ಹಿಂದಳಿದ ವರ್ಗಗಳ ತಾಲೂಕು ಅಧ್ಯಕ್ಷ ರಾಮಕಿಟ್ಟಿ ವೀರಪ್ಪ,ಕೃಷ್ಣಮೂರ್ತಿ,ಶಿವು,ವತ್ಸಲಾ, ಗಿರಿಜಾ, ಸೇರಿದಂತೆ ಅನೇಕರು ಭಾಗವಹಿಸಿ ದಲಿತ ವಿರೋಧಿ ಆರೋಪಿ ಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.