ಆಶ್ರಯಕ್ಕೆ ಆಗ್ರಹಿಸಿ ಮಂಗಳಮುಖಿಯರು ಪ್ರತಿಭಟನೆ.

201

ಚಿಕ್ಕಬಳ್ಳಾಪುರ/ಚಿಂತಾಮಣಿ: ಮಂಗಳಮುಖಿಯರಾಗಿ ನಾವು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸರ್ಕಾರ ಹಲವಾರು ಸೌಲಭ್ಯಗಳು ಒದಗಿಸುತ್ತಿದೆ. ಎಂದು ಹೇಳುತ್ತಿದ್ದೆ ಹೊರತು ನಮಗೆ ಏನೇನು ಸೌಲಭ್ಯಗಲೂ ಒದಗಿಸುತ್ತಿಲ್ಲವೆಂದು ಕನಿಷ್ಠ ಪಕ್ಷ ಖಾಲಿ ನಿವೇಶನ ಸಹ ನೀಡಿಲ್ಲವೆಂದು ಮಂಗಳಮುಖಿಯರು ದೂರಿದರು.

ಅವರು ನಗರದ 18 ನೇ ವಾರ್ಡಿನ ಕೀರ್ತಿ ನಗರದ ಸರ್ಕಾರಿ ಜಮೀನು ಸರ್ವೆ ನಂಬರ್ 10ರ ಖಾಲಿ ಜಾಗದಲ್ಲಿ ನಿವೇಶನಗಳನ್ನು ನೀಡುವಂತೆ ಆಗ್ರಹಿಸಿ ಅಲ್ಲಿಯೇ ಅಡುಗೆ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಭೇಟಿ ಮಾಡಿದ ನಮ್ಮೂರು ಟಿವಿ ವಾಹಿನಿಯೊಂದಿಗೆ ಮಾತನಾಡಿ ಸಮಾಜದಲ್ಲಿ ಗಂಡು ಹೆಣ್ಣು ಜೊತೆಗೆ ತೃತೀಯ ಲಿಂಗಕ್ಕೆ ಸೇರಿರುವ ಮಂಗಳಮುಖಿ ಯರಿಗೆ ಸಂವಿಧಾನ ಬದ್ದವಾಗಿ ಎಲ್ಲಾ ಹಕ್ಕು ಗಳನ್ನು ಜಾರಿಗೊಳಿಸಿದ್ದೇವೆ ಎಂದು ವೇದಿಕೆಗಳಲ್ಲಿ ಹೇಳುತ್ತಿದ್ದಾರೆಯೇ ಹೊರತು ಇದುವರೆಗೂ ಜಾರಿಗೆ ಬಂದಿಲ್ಲವೆಂದರು.

2017ರಲ್ಲಿ ನಮ್ಮಗೆ ಚಿನ್ನ ಸಂದ್ರ ಸಮೀಪದ ಸರ್ವೇ ನಂಬರ್ 194ರನ್ನು ಮಂಗಳಮುಖಿ ಯರಿಗೆ ಮಂಜೂರು ಮಾಡಿ ಅಲ್ಲಿ ನಿವೇಶನ ನೀಡಲು ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿಗಳು ಸಂಬಂಧಪಟ್ಟ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಇದುವರೆಗೂ ಜಮೀನು ಮಂಜೂರು ಮಾಡಿಲ್ಲ ನಿವೇಶನಗಳು ನೀಡಿಲ್ಲ ಎಂದು ದೂರಿದರು.
ನಾವುಗಳು ಮನೆಗೆ ಬಾಡಿಗೆಗೆ ಹೋದರೆ ಒಂದೆರಡು ತಿಂಗಳು ಇರಿಸಿಕೊಂಡು ನಂತರ ಮತ್ತೆ ಮನೆಗಳನ್ನು ಖಾಲಿ ಮಾಡಿ ಅಂತ ಹೇಳ್ತಾರೆ ನಾವು ಎಲ್ಲಿಗೆ ಹೋಗುವುದು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದೇವೆ ಕಳೆದ 30 ವರ್ಷ ಗಳಿಂದ ಚಿಂತಾಮಣಿಯಲ್ಲಿಯೇ ವಾಸ ಮಾಡುತ್ತಿದ್ದೇವೆ ನಮ್ಮ ಗೆ ಸರ್ಕಾರ ಕೊಡುವ ದುಡ್ಡು ಸಾಲಲ್ಲ ನಮಗೆ ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ಪಡಿತರ ಚೀಟಿ ಎಲ್ಲಾ ದಾಖಲೆಗಳು ಇವೆ ಆದರೆ ನಾವು ಇರಲು ನಿವೇಶನ ಇಲ್ಲ ಮನೆಯೂ ಇಲ್ಲ ಸತ್ತರೆ ಸ್ಮಶಾನ ಇಲ್ಲವೆಂದು ದೂರಿದರು.

ಪ್ರತಿಭಟನಾ ವಿಷಯ ತಿಳಿದು ಚಿನ್ನಸಂದ್ರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನವೀನ್ ಸ್ಥಳಕ್ಕೆ ಬಂದು ಅವರು ಮನವಿ ಆಲಿಸಿದ ನಂತರ ಚಿನ್ನ ಸಂದ್ರ ಸರ್ವೇ ನಂಬರ್ 194 ಎರಡು ಎಕರೆ ಜಮೀನು ಪರಿಶೀಲನೆ ಬಗ್ಗೆ ಉಪವಿಭಾಗಾಧಿಕಾರಿಗಳು ಬರೆದಿರುವ ಪತ್ರವನ್ನು ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಜಿಲ್ಲಾ ಅಧ್ಯಕ್ಷೆ ಮತ್ತು ಮಂಗಳಮುಖಿಯರ ಅಧ್ಯಕ್ಷೆ ಸೈಯದ್ ಸಲ್ಮಾ , ನಿಶಾ, ಪುಲ್ ಮತ್ತಿ, ಅನಿತಾ, ಪ್ರಿಯಾ , ಸರೋಜಾ , ಪೂನಂ , ಕಾವ್ಯ, ಸುಂದರಿ, ಕಲ್ಪನಾ, ಅನು , ತುಲಸಿ ,ಶ್ರಾವಣಿ ,ಸಂಗೀತ ಉಪಸ್ಥಿತಿಯಿದ್ದರು.