ಅನಿರ್ಧಿಷ್ಟ ಕಾಲ ಮುಷ್ಕರಕ್ಕೆ ಬೆಂಬಲ….

176

ಚಿಕ್ಕಬಳ್ಳಾಪುರ/ಚಿಂತಾಮಣಿ:ಅಖಿಲ ಭಾರತ ಮೊಟರ್ ಟ್ರಾನ್ಸ್ಪೊರ್ಟ್ ಕಾಂಗ್ರೆಸ್ ಮತ್ತು ಫೇಡರೆಷನ್ ಆಫ್ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್ ಅಸೋಸಿಯಷನ್ ವತಿಯಿಂದ ಅನಿರ್ಧಿಷ್ಟ ಕಾಲ ದೇಶಾದ್ಯಂತ ವಾಣಿಜ್ಯ ವಾಹನಗಳ ಮುಷ್ಕರಕ್ಕೆ ಚಿಂತಾಮಣಿ ತಾಲೂಕು ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರಕ್ಕೆ ಸಂಪೂರ್ಣವಾಗಿ ಬೆಂಬಲವನ್ನು ಸೂಚಿಸಿದರು .

ಚಿಂತಾಮಣಿ ತಾಲೂಕಿನಲ್ಲಿರುವ ಎಲ್ಲಾ ಲಾರಿ ಮಾಲಿಕರು ತಮ್ಮ ತಮ್ಮ ಲಾರಿಗಳನ್ನು ನಿಲ್ಲಿಸಿ ಮತ್ತು ಹೊರ ರಾಜ್ಯದಿಂದ ಬಂದಿರುವ ಲಾರಿಗಳು ನಿಲ್ಲಿಸಿ ಮುಷ್ಕರದಲ್ಲಿ ಭಾಗವಹಿಸಿದರು.

ನಂತರ ಲಾರಿ ಮಾಲೀಕರು ಮಾತನಾಡಿ ಟೂಲ್ ಮುಕ್ತ ಭಾರತ , ಇಂಧನ ದರ ಕಡಿಮೆ ಮಾಡಬೇಕು ಮತ್ತು ಥರ್ಡ್ ಪಾರ್ಟ್ ಇನ್ಸೂರೆನ್ಸ್ ಪ್ರಿಮಿಯಮ್ ದರ ಕಡಿಮೆ ಮಾಡುವವರೆಗೂ ನಮ್ಮ ಮುಷ್ಕರವನ್ನು ಚಾಲ್ತಿಯಲ್ಲಿರುತ್ತದೇ ಎಂದರು.

ಚಿಂತಾಮಣಿ ತಾಲೂಕಿನಿಂದ ಪ್ರತಿದಿನ ನೂರಾರು ಲಾರಿಗಳು ತರ್ಕಾರಿ , ಟಮೋಟು ಮತ್ತು ಇತರೆ ಲೋಡ್ ಮಾಡಿ ಹೂರ ರಾಜ್ಯಕ್ಕೆ ಹೊಗುತ್ತದೆ ಈ ಮುಷ್ಕರದಿಂದ ರೈತರಿಗೆ ತುಂಬಾ ನಷ್ಟ ಆಗುತ್ತದೆ ಏಕಾಏಕಿಯಾಗಿ ಮುಷ್ಕರ ಅಂದರೆ ರೈತರಿಗೆ ತೊಂದರೆ ಆಗುತ್ತದೆ ಎಂದು ಮಾರುಕಟ್ಟೆಯಲ್ಲಿರುವ ರೈತರು ಹೇಳಿದರು.

ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಎಂ ಜಹೀರ್ , ಕಾರ್ಯದರ್ಶಿ ಶೌಕತ್ ಅಲಿ ಖಾನ್, ಆನಂದ್ ಕುಮಾರ್ ,
ಬಾಬು ಕೆ ಜಿ ಎನ್, ರಾಜಾ ಸ್ವಾಮಿ , ಬಿ ಆರ್ ಎಲ್ ಬಾಬು, ಜಮ್ ಜಮ್ ಶಬ್ಬೀರ್ ಪಾಷಾ ,ಎಸ್ ಎನ್ ನಾಗರಾಜ್ , ಎಸ್ ಕೆ ಪಿ ಫಯಾಜ್ ಸೇರಿದಂತೆ ಎಲ್ಲಾ ಮಾಲಿಕರು , ಚಾಲಕರು ಮತ್ತಿತರರು ಉಪಸ್ಥಿತರಿದ್ದರು