ಹಮಾಲಿ ಕೂಲಿ ಕಾರ್ಮಿಕರಿಂದ ಅಭಿನಂದನಾ ಸಮಾರಂಭ

336

ಚಿಕ್ಕಬಳ್ಳಾಪುರ/ಚಿಂತಾಮಣಿ: ಹಮಾಲಿ ಕೂಲಿ ಕಾರ್ಮಿಕರು ಶ್ರಮ ಜೀವಿಗಳಾಗಿದ್ದು ಪ್ರತಿದಿನ ಬೇವರು ಸುರಿಸಿ ದುಡಿಯುವವರಾಗಿದ್ದು ತಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹಾರಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆ ಉಪಸಭಾಧ್ಯಕ್ಷ ಜೆಕೆ ಕೃಷ್ಣಾ ರೆಡ್ಡಿ ರವರು ಹಮಾಲಿ ಕೂಲಿ ಕಾರ್ಮಿಕರಿಗೆ ಭರವಸೆ ನೀಡಿದರು.

ನಗರದ ಎಪಿಎಂಸಿ ಟೋಮೇಟೊ ಮಾರುಕಟ್ಟೆ ಯ ಶ್ರಮಿಕರ ಭವನದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಹಮಾಲಿ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಹಮಾಲಿಗಳ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದರು.

ತಾನು ಕಳೆದ ಹತ್ತು ವರ್ಷಗಳಿಂದ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ರೀತಿಯಾಗಿ ಸಮಾಜ ಸೇವೆ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದ ಕಾರಣ 2013ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೇವೆಯನ್ನು ಗುರುತಿಸಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದು ನನ್ನ ಐದು ವರ್ಷಗಳ ಅವಧಿಯಲ್ಲಿ ಪಕ್ಷಾತೀತವಾಗಿ ಬಡವ ಶ್ರೀಮಂತ ಎನ್ನದೆ ಹಾಗೂ ಯಾವುದೇ ಭೇದಭಾವವಿಲ್ಲದೆ ಎಲ್ಲಾ ಜನತೆಗೆ ಸರ್ಕಾರದ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಒದಿಗಿಸಿದ ಪರಿಣಾಮ 2018 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಎರಡನೇ ಬಾರಿ ಶಾಸಕರಾಗಿ ಆಯ್ಕೆ ಮಾಡಿ ಹಾಗೂ ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ದಿಂದ ವಿಧಾನಸಭೆ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಚಿಂತಾಮಣಿ ಜನತೆ ಹಾಗೂ ರಾಜ್ಯದ ಜನತೆಗೆ ಯಾವುದೇ ರೀತಿಯಲ್ಲಿ ಕಪ್ಪು ಚುಕ್ಕೆ ತರದ ಹಾಗೇ ತನ್ನ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪಿ.ವಿ ವೆಂಕಟರವಣಪ್ಪ ಕವಾಲಿ ವೆಂಕಟರವಣಪ್ಪ , ಯುವ ಮುಖಂಡ ವಿ. ಅಮರ್, ಕೆ ಎನ್ ಕೃಷ್ಣ ಮೂರ್ತಿ , ಎಮ್ ಕೃಷ್ಣಪ್ಪ , ದೇವಮ್ಮ , ನಗರಸಭಾ ಸದಸ್ಯರಾದ ಪ್ರಕಾಶ , ಶಫೀಕ್, ಬ್ಲಡ್ ಮಂಜುನಾಥ್, ಕೃಷ್ಣಪ್ಪ ,ವೆಂಕಪರವಣಪ್ಪ , ಅಲ್ಲೂ ಸಾಧಿಕ್ ,ಡಿಶ್ ಅಪ್ಪಿ ,ಚಿನ್ನಸಂದ್ರ ವೆಂಕಟೇಶ್, ರಾಮು ಸೇರಿದಂತೆ ಎಲಾ ಹಮಾಲಿ ಕೂಲಿ ಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.