ಟಿಪ್ಪು ಜಯಂತಿಗೆ ಮುಸ್ಲಿಂ ಸಮುದಾಯದಿಂದಲೇ ಬಹಿಷ್ಕಾರ…!?

207

ಚಿಕ್ಕಬಳ್ಳಾಪುರ/ ಚಿಂತಾಮಣಿ : ಟಿಪ್ಪು ಜಯಂತಿ ಕಾರ್ಯಕ್ರಮ ದಲ್ಲಿ ಚಿಂತಾಮಣಿ ಕ್ಷೇತ್ರದ ಮುಸ್ಲಿಂ ಸಮುದಾಯ ದವರು ಭಾಗವಹಿಸಿವುದಿಲ್ಲ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ ಎಂದು ಜಾಮಿಯಾ ಮಸೀದಿ ಅಧ್ಯಕ್ಷ ಮೂನ್ ಸ್ಟಾರ್ ಗೌಸ್ ಪಾಷಾ ತಿಳಿಸಿದ್ದಾರೆ .

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಆದರೆ ಸಭಾಂಗಣದಲ್ಲಿ ಆಸನದ ವ್ಯವಸ್ಥೆ ಕಡಿಮೆ ಇರುವ ಕಾರಣ ಜಯಂತಿಯಲ್ಲಿ ಭಾಗವಹಿಸಲು ಬರುವ ನಮ್ಮ ಸಾವಿರಾರು ಮುಸ್ಲಿಂ ಭಾಂದವರಿಗೆ ತೊಂದರೆ ಉಂಟಾಗಬಹುದು ಎಂದು ಈಗಾಗಲೇ ಕ್ಷೇತ್ರದ ಶಾಸಕ ಕೃಷ್ಣಾರೆಡ್ಡಿಗೆ, ತಾಲ್ಲೂಕು ಆಡಳಿತಕ್ಕೂ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ, ಈಗಾಗಲೇ ಎಲ್ಲಾ ರಷ್ಟ್ರೀಯ ಹಬ್ಬಗಳ ಆಚರಣೆಯನ್ನು ನಗರದ ಝಾನ್ಸಿರಾಣಿ ಲಕ್ಷ್ಮಿ ಬಾಯಿ ಕ್ರೀಡಾಂಗಣದಲ್ಲಿ ಆಚರಿಸುವುದು ವಾಡಿಕೆ, ಆದರಂತೆ ಟಿಪ್ಪು ಜಯಂತೋತ್ಸವವನ್ನೂ ಅಲ್ಲೇ ಆಚರಿಸುವಂತೆ ಮನವಿ ಮಾಡಿದರೂ, ತಾಲ್ಲೂಕು ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಪಂದಿಸಿದ ಕಾರಣ ನಾವು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಸರ್ಕಾರದ ಆದೇಶದ ಹೆಸರಲ್ಲಿ ಟಿಪ್ಪು ಸುಲ್ತಾನ್ ಜಯಂತೋತ್ಸವ ಕಾಟಾಚಾರದ ಆಚರಣೆ ಯಂತೆ ಮೇಲ್ನೋಟಕ್ಕೆ ಕಂಡುಬರುತ್ತಿರುವ ಹಿನ್ನಲೆ ಯಲ್ಲಿ ಕಾರ್ಯಕ್ರಮ ವನ್ನು ಬಹಿಷ್ಕರಿಸಿದ್ದೇವೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಯಾದ ಮಹಮ್ಮದ್ ಇನಾಯತುಲ್ಲಾ ,ಶೇಖ್ ಸಾಧಿಕ್ ರಜ್ವಿ ಜಮೀರ್ ಹಾಗೂ ಇನ್ನಿತರರು ಭಾಗವಹಿಸಿದ್ದರು .