ಅದ್ದೂರಿ ಟಿಪ್ಪು ಜಯಂತೋತ್ಸವ

211

ಬೆಂಗಳೂರು/ಕೆ.ಆರ್.ಪುರ: ಮೈಸೂರು ಹುಲಿ ಹಜರತ್ ಟಿಪ್ಪಸುಲ್ತಾನ್ ದೇಶ ಕಂಡ ಅಪ್ರತಿಮ ದೇಶ ಭಕ್ತ ಅಲ್ಲದೆ ಸರ್ವಧರ್ಮ ಸಹಿಷ್ಣು ಆಗಿದ್ದ ಎಂದು ಕರ್ನಾಟಕ ಜನಾಂದೊಲನ ಸಂಘದ ರಾಜ್ಯಾದ್ಯಕ್ಷ ಮರಿಯಪ್ಪ ಅಭಿಪ್ರಾಯಪಟ್ಟರು.

ಕೆಆರ್ ಪುರ ಕ್ಷೇತ್ರದ ವಿಜನಾಪುರದಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಬಗ್ಗೆ ಅಪಪ್ರಚಾರ ಸಲ್ಲದು ಎಂದರು. ನಮ್ಮ ದೇಶ ಮತ್ತು ರಾಜ್ಯಕ್ಕೆ ಅನೇಕ ಕೊಡುಗೆ ಗಳನ್ನು ನೀಡಿದ್ದಾರೆ.ಭೂದಾಕಲೆ,ರೇಷ್ಮೆ, ದಲಿತರಿಗೆ ಭೂಮಿ ಮಾಲೀಕತ್ವ, ದಲಿತ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಬಾಳು ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದು ಆದರೆ ಕೆಳವುರು ಇತಿಹಾಸ ತಿರುಚುವ ಕೆಲಸಕ್ಕೆ ಮುಂದಾಗಿರುವುದು ಬೇಸರ ತರಿಸಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಜೆ.ಎಸ್ ಮುಖಂಡ ಗುಣ ಶೇಖರ್, ಜನ ಸಂದ್ಬಾವನಾ ಫೌಂಡೇಶನ್ ಅಧ್ಯಕ್ಷ ಫಯಾಜ್ ಅಕ್ರಂ ಪಾಷಾ, ಜಮಿಯಾ ಮಸೀದ್ ಅದ್ಯಕ್ಷ ಸಯ್ಯದ್ ಅಯೂಬ್, ಪಧಾದಿಕಾರಿಗಳು ಸಯ್ಯದ್ ಜಕ್ರಿಯ, ಅಬ್ದುಲ್ ಬಷೀರ್, ಜಮೀರ್ ಅಹಮದ್, ಅನ್ವರ್, ಕೆ.ಜೆ.ಎಸ್ ಸಂಘದ ಪದಾಧಿಕಾರಿಗಳು ಮುಂತಾದವರಿದ್ದರು.