ಅಡ್ಡ ದಾರಿ ಹಿಡಿಯಿತೇ ಸರ್ಕಾರದ ಹಣ?

153

ದರ್ಗಾ ಕಾಂಪ್ಲೇಕ್ಸ್ ನಿರ್ಮಾಣಕ್ಕೆ ಸರ್ಕಾರದಿಂದ ಎರಡು ಕೋಟಿ ಬಿಡುಗಡೆಯಾದ ಹಣ ಮಾಯ.

ಚಿಕ್ಕಬಳ್ಳಾಪುರ/ ಚಿಂತಾಮಣಿ: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಹೆಸರು ವಾಸಿಯಾಗಿರುವ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ದರ್ಗಾ ಬಳಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲು ಹಿಂದಿನ ಬಿಜೆಪಿ ಸರ್ಕಾರದ ವಕ್ಫ್ ಸಚಿವರು ಮುಮ್ತಾಜ್ ಅಲಿ ಖಾನ್ ದರ್ಗಾ ಅಭಿವೃದ್ಧಿಗೆ ಎರಡು ಕೋಟಿ ಹಣವನ್ನು ಬಿಡುಗಡೆ ಮಾಡಿಸಿದ್ದರು.

ಅದೇ ಹಣದಲ್ಲಿ ದರ್ಗಾ ಬಳಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ನಲವತ್ತಾರು ಅಂಗಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಆ ನಲವತ್ತಾರು ಅಂಗಡಿಗಳು ನಿರುಪಯುಕ್ತವಾಗಿ ಅಂಗಡಿಯ ಶಟರ್ ತುಕ್ಕು ಹಿಡಿಯುತ್ತಿವೆ.

ಅಂಗಡಿಗಳ ಟೆಂಡರ್ ಪ್ರಕ್ರಿಯೆ ಕರೆಯಲು ವಕ್ಫ್ ಅಧಿಕಾರಿಗಳು ಮುಂದಾಗುತ್ತಿಲ್ಲ ಹಲವಾರು ಬಾರಿ ಸ್ಥಳೀಯರು ಟೆಂಡರ್ ಪ್ರಕ್ರಿಯೆ ಕರೆಯಲು ಮನವಿ ಮಾಡಿದ್ದರೂ ಸಹ ಪ್ರಯೋಜನವಾಗುತ್ತಿಲ್ಲ .

ನಿರ್ಮಾಣಗೊಂಡಿರುವ ಅಂಗಡಿಗಳ ಅಕ್ಕಪಕ್ಕದಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ

ಕಮರ್ಷಿಯಲ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಹಲವಾರು ಅಂಗಡಿಗಳು ಇಟ್ಟಿರುವುದರಿಂದ ಕಸ ಹೆಚ್ಚಾಗುತ್ತಿದೆ .

ಸ್ಥಳೀಯರಿಂದ ತಿಳಿದು ಬಂದ ಮಾಹಿತಿ ಏನೆಂದರೆ ಸರಕಾರದಿಂದ ಎರಡು ಕೋಟಿ ಹಣ ಬಿಡುಗಡೆ ಆಗಿತ್ತು ಆದರೆ ಎಪ್ಪತ್ತು ಆರು ಲಕ್ಷ ವೆಚ್ಚದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣಗೊಂಡಿದ್ದು ಒಂದು ಕೋಟಿ ಹಣ ಸರ್ಕಾರಕ್ಕೆ ವಾಪಸ್ ಆಗಿದೆ ಇನ್ನು ಅದರಲ್ಲಿ ಉಳಿದ ಹಣ ಎಲ್ಲಿ ಹೋಯಿತು ಇದಕ್ಕೆ ಉತ್ತರ ಕೊಡುವವರು ಯಾರು ಎಂದು ಕಾದು ನೋಡಬೇಕು ?ಇದಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ .?

ಹಲವಾರು ವರ್ಷಗಳಿಂದ ಅಂಗಡಿಗಳ ಟೆಂಡರ್ ಪ್ರಕ್ರಿಯೆ ಕರೆಯದ ಕಾರಣ ಕೆಲವರು ಅಂಗಡಿಗಳಲ್ಲಿ ಸಂಸಾರಗಳನ್ನು ನಡೆಸುತ್ತಿದ್ದಾರೆ ಇದಕ್ಕೆ ವಕ್ಫ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಎದ್ದು ಕಾಣುತ್ತಿದೆ .

ಈ ಕುರಿತು ಪ್ರಭಾರಿ ಜಿಲ್ಲಾ ವಕ್ಫ್ ಅಧಿಕಾರಿಗೆ ಮಾತನಾಡಿದರೆ ಅವರು ವರದಿಗಾರರ ಜೊತೆ ಮಾತನಾಡಲು ಮುಂದಾಗುತ್ತಿಲ್ಲ .

ಈಗಲಾದರೂ ವಕ್ಫ್ ಅಧಿಕಾರಿಗಳು ಎಚ್ಚೆತ್ತುಕೊಂಡು ಕಮರ್ಷಿಯಲ್ ಕಾಂಪ್ಲೆಕ್ಸ್ ಅಂಗಡಿಗಳ ಟೆಂಡರ್ ಪ್ರಕ್ರಿಯೆ ಕರೆಯುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ .

ಪ್ರತಿ ಮೂರು ತಿಂಗಳಿಗೊಮ್ಮೆ ದರ್ಗಾ ಹುಂಡಿಗಳಿಂದ ಇಪ್ಪತ್ತರಿಂದ ಇಪ್ಪತ್ತೆರಡು ಲಕ್ಷ ವಕ್ಫ್ ಆದಾಯವಾಗುತ್ತದೆ ಆದರೆ ವಕ್ಫ್ ಮಂಡಳಿ ಕಡೆಯಿಂದ ದರ್ಗಾ ಅಭಿವೃದ್ಧಿಯಾಗುತ್ತಿಲ್ಲ ಇದಕ್ಕೆ ಕಾರಣ ಏನು ?