ಮಹಿಳಾ ಸಂಘಟನೆ ಸಮ್ಮೇಳನ

192

ಮಂಡ್ಯ/ಮಳವಳ್ಳಿ: ಅಖಿಲಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ. ಸ್ವಸಹಾಯ ಸಂಘಗಳಿಗೆ ಸಹಾಯ ಧನ(ಸಬ್ಸಿಡಿ) ಹಣ ನೀಡುವಂತೆ ಒಂದನೇ ಟೌನ್ ಘಟಕ ಸಮ್ಮೇಳನ ಮಳವಳ್ಳಿಪಟ್ಟಣದ ವಡ್ಡರಕಾಲೋನಿಯಲ್ಲಿ ನಡೆಸಲಾಯಿತು.
ಸಮ್ಮೇಳನ ಧ್ವಜಾರೋಹಣ ವನ್ನು ಹಿರಿಯ ಮಹಿಳೆ ಗೌರಮ್ಮ ನೆರವೇರಿಸಿದರು. ನಂತರ ಸಮ್ಮೇಳನ ದ ಕಾರ್ಯಕ್ರಮ ದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜಿ. ರಾಮ ಕೃಷ್ಣ ಮಾತನಾಡಿ, ಸಮಾಜದಲ್ಲಿ ಹೆಣ್ಣು ಹಾಗೂ ಗಂಡಿನ ನಡುವೆ ಇನ್ನೂ ತಾರತಮ್ಯ ವಿದೆ . ಹೆಣ್ಣಿಗೆ ಸಮಾನವಾದ ಸ್ಥಾನಮಾನ ನೀಡುತ್ತಿಲ್ಲ , ಸಂವಿದಾನದಲ್ಲಿದ್ದರೂ ಅದು ಜಾರಿಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ನಿರಂತರವಾಗಿ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ. ಮಹಿಳೆಯರು ಸಂಘಟಿತರಾಗಬೇಕು ಎಂದರು ಇದೇ ಸಂದರ್ಭದಲ್ಲಿ ವಸತಿರಹಿತರಿಗೆ ನಿವೇಶನ ನೀಡಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಪುರಸಭೆ ಯಿಂದ ಸ್ವ ಸಹಾಯ ಸಂಘಗಳಿಗೆ ಸಬ್ಸಿಡಿ ಹಣವನ್ನು ನೀಡಬೇಕು. ಎಂದು ಒತ್ತಾಯಿಸಿದರು. ಸಮ್ಮೇಳನದಲ್ಲಿ ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಕಾರ್ಯದರ್ಶಿ ಮಂಜುಳ, ಸುಶೀಲಾ, ಸುನೀತಾ ಟೌನ್ ಘಟಕದ ಅಧ್ಯಕ್ಷೆ ಸುನೀತಾ ಹನುಮಂತ, ಕಾರ್ಯದರ್ಶಿ ಸುನೀತಾಮಹದೇವ, ಖಜಾಂಚಿ ಜ್ಯೋತಿ, ಟೌನ್ ಕಮಿಟಿ ಉಪಾಧ್ಯಕ್ಷೆ ಮಣಿಯಮ್ಮ, ಕಟ್ಟಡ ಕಾರ್ಮಿಕ ಸಂಘ ಕಾರ್ಯದರ್ಶಿ ತಿಮ್ಮೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು