ಜನಸ್ಪಂದನಾ ಕಾರ್ಯಕ್ರಮ.

199

ಚಿಕ್ಕಬಳ್ಳಾಪುರ/ ಚಿಂತಾಮಣಿ :ತಾಲೂಕಿನ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಉಪಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅಧ್ಯಕ್ಷೆಯಲ್ಲಿ ಮೊದಲನೇ ಜನಸ್ಪಂದನಾ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು .
ಕಾರ್ಯಕ್ರಮದಲ್ಲಿ ಗ್ರಾಮಗಳ ಹಲವಾರು ಸಮಸ್ಯೆಗಳ ಸುರಿಮಳೆ.ವಿದ್ಯುತ್, ಚರಂಡಿ, ರಸ್ತೆ, ವೃದ್ಧಾಪ್ಯ‌ ವೇತನ, ವಿಧವಾ ವೇತನ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಸುರಿಮಳೆ.ಜನಸಾನಾನ್ಯರಿಂದ ಎಲ್ಲಾ ಇಲಾಖೆಗಳ 357 ಅರ್ಜಿ ಗಳು ಬಂದಿವೆ .

ಅನಿಲ ಸಂಪರ್ಕ ಮತ್ತು ಪಿಂಚಣಿ ಗಾಗಿ ಇದು ವರೆಗೂ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಅನಿಲ ಸಂಪರ್ಕ ಗ್ಯಾಸ್ ಸ್ಟವ್ ಮತ್ತು ಆರ್ಡರ್ ಕಾಪಿಗಳು ವಿತರಣೆ ಮಾಡಿದರು .

ಖಾತೆ ಬದಲಾವಣೆಗೆ ಅಧಿಕಾರಿಗಳು ಸಾರ್ವಜನಿಕರಿಗೆ ಕಛೇರಿಯ ಹತ್ತಿರ ಪದೇ ಪದೇ ತಿರಿಗಿಸಿಕೊಳ್ಳ ಬೇಡಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ವರ್ಷ ದಲ್ಲಿ ಎರಡು ಬಾರಿ ಜನಸ್ಪಂದನ ಕಾರ್ಯಕ್ರಮ ವನ್ನು ಮಾಡಲಾಗುತ್ತದೆ ಎಂದರು.

ಜನಸ್ಪಂದನ ಕಾರ್ಯಕ್ರಮವನ್ನು ಮುಂದಿನ ತಿಂಗಳು ಮುರುಗಮಲ್ಲಾ ದಲ್ಲಿ ನಡೆಸಲಾಗುತ್ತದೆ ಎಂದರು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಎ ಸಿ ಆಶೋಕ್ ತೈಲಿ , ತಹಶೀಲ್ದಾರ್ ವಿಶ್ವನಾಥ್ , ಗ್ರಾಮಂತರ ಠಾಣೆಯ ಎಸ್ ಐ ಜಗದೀಶ್ ರೆಡ್ಡಿ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.