ಮುಖ್ಯಮಂತ್ರಿ ಪತ್ರಕ್ಕೂ ಲೆಕ್ಕಸದ ನಗರಸಭೆ ಅಧಿಕಾರಿ ಅಮಾನತು..

178

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರಸಭೆಯಲ್ಲಿ ಕರ್ತವ್ಯ ಲೋಪವೆಸಗಿ ಕಚೇರಿಯ ಕೆಲಸ ಕಾರ್ಯಗಳನ್ನು ಸಕ್ರಿಯವಾಗಿ ನಿರ್ವಹಿಸದ ಪರಿಣಾಮ ನಗರಸಭೆಯ ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಭಾರ ವ್ಯವಸ್ಥಾಪಕ ನಾರಾಯಣಸ್ವಾಮಿಯನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ನಗರದ ನಿವಾಸಿ ಮುನೆಪ್ಪ ಬಿನ್ ವೆಂಕಟಪ್ಪ ಎಂಬವರು 26 ಜುಲೈ 2016 ರಂದು ಮುಖ್ಯಮಂತ್ರಿಗಳಿಗೆ ತಾನು ಅಂಗವಿಕಲ ಚಿಂತಾಮಣಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಬಾಡಿಗೆ ಪಾವತಿಸಲು ಕಷ್ಟವಾಗಿದೆ. ತನಗೆ ಚಿಂತಾಮಣಿ ನಗರದಲ್ಲಿ ಆಶ್ರಯ ಯೋಜನೆ ಯಡಿ ನಿವೇಶನ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಅಂದಿನ ಸಿಎಂ ಮುನೆಪ್ಪ ರವರಿಗೆ ನಿವೇಶನ ಕಲ್ಪಿಸಿಕೊಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು .ಜಿಲ್ಲಾಧಿಕಾರಿಗಳು ಚಿಂತಾಮಣಿ ನಗರಸಭೆಗೆ ಮುನೆಪ್ಪಗೆ ನಿವೇಶನ ನೀಡುವಂತೆ ಸೂಚಿಸಿದ್ದರು.

ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕ ನಾಗಿ ಸಿಬ್ಬಂದಿ ಶಾಖೆ ವಿಷಯ ನಿರ್ವಾಹಕರಾಗಿ ಪ್ರಭಾರ ಕಚೇರಿ ವ್ಯವಸ್ಥಾಪಕರಾಗಿ ನಗರ ವಸತಿ ಮತ್ತು ನಗರ ನಿವೇಶನ ಯೋಜನೆಯಲ್ಲೂ ಕಾರ್ಯ ನಿರ್ವಹಿಸುತ್ತಿರುವ ನಾರಾಯಣಸ್ವಾಮಿ ಅವರು ಸಿಎಂ ಮತ್ತು ಡಿಸಿ ಆದೇಶ ಪಾಲಿಸದೆ ಫಲಾನುಭವಿಗೆ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಹರೀಶ್ ತಿಳಿಸಿದರು.