ಪುಣ್ಯತಿಥಿ ಕಾರ್ಯಕ್ರಮ…

234

ಮಂಡ್ಯ/ಮಳವಳ್ಳಿ: ಮಂಡ್ಯದ ಗಂಡು , ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳ ಬಳಗ ವತಿಯಿಂದ 11 ನೇ ದಿನ ಪುಣ್ಯತಿಥಿ ಕಾರ್ಯವನ್ನು ಮಳವಳ್ಳಿ ಪಟ್ಟಣದಲ್ಲಿ ಅಭಿಮಾನಿಯೊಬ್ಬ ತಲೆಬೋಳಿಸಿಕೊಂಡು ಕುದುರೆ ಮೇಲೆ ಮಾಡಿದಲ್ಲದೆ ಒಂದೇ ವೇದಿಕೆಯಲ್ಲಿ ಸರ್ವಧರ್ಮಗಳ ಭಾವಪೂರ್ಣಗಳ ಶ್ರದ್ದಾಂಜಲಿ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಮಳವಳ್ಳಿಪಟ್ಟಣದ. ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಪಟ್ಟಣದ ಪ್ರಮುಖಬೀದಿಗಳಲ್ಲಿ ನಾಲ್ವರು ಅಭಿಮಾನಿಗಳು ತಲೆ ಬೋಳಿಸಿಕೊಂಡು ಮೆರವಣಿಗೆ ಮಾಡಲಾಯಿತು. ನಂತರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಗಳ ಸ್ವಾಮೀಜಿಗಳಾದ ಬಿ ಜಿ ಪುರ ಹೊರಮಠದ ಶ್ರೀ ಚಂದ್ರಶೇಖರ ಸ್ವಾಮೀಜೀ, ರಾಮರೂಢ ಮಠದ ಬಸವಾನಂದಸ್ವಾಮೀಜೀ, ಸಂತಮತೀಯಾಸರ ದೇವಾಲಯದ ಡಾ . ಜೋಸೆಫ್ ಮರಿ ಜಿ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ತಜಮಾಲ್ ತನ್ವೀರ್, ಪ್ರಜಾಪೀತ ಬ್ರಹ್ಮಕುಮಾರಿಯ ಜಿ.ಕೆ ಪ್ರಣೇಶ್, ಸಿದ್ದರಾಮೇಶ್ವರ ಪುಣ್ಯಪೀಠದ ಮಾದೇಶ ಗುರೂಜೀ, ಬೌದ್ಧ ಮಹಾಸಭಾದ ಮಂಚಯ್ಯ ರವರನ್ನು ವೇದಿಕೆಯಲ್ಲಿ ಕರೆದು ತಂದು ಉಪನ್ಯಾಸ ಮಂಡಿಸಲಾಯಿತು. ಇದಲ್ಲದೆ ಅಭಿಮಾನಿಗಳಿಂದ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.