ರೈತರಿಗೆ ಅನುಕೂಲ ಮಾಡಿಕೊಡಿ..

199

ಬುಕ್ಕನಹಳ್ಳಿ ಕೆರೆಯಲ್ಲಿ ಹೂಳು ಎತ್ತುವ ಕೆಲಸ ಸ್ಥಗಿತ ಗೊಳಿಸಲು ರೈತರು ಮನವಿ.

ಚಿಕ್ಕಬಳ್ಳಾಪುರ/ ಚಿಂತಾಮಣಿ: ತಾಲೂಕಿನ ಕಾಗತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಕ್ಕನಹಳ್ಳಿ ಕೆರೆಯಲ್ಲಿ ಜೆಸಿಬಿ ಮೂಲಕ ಹೂಳು ಎತ್ತುವ ಕಾಮಗಾರಿ ನಡೆಸುತ್ತಿರುವುದ್ದರಿಂದ ಕೆರೆಯ ಪಕ್ಕದ ತೋಟಕ್ಕೆ ಮಣ್ಣಿನ ದೂಳು ತುಂಬಿಕೊಂಡು ಬೆಳೆ ನಾಶಾವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲದಿನಗಳ ಕಾಲ ಕಾಮಗಾರಿಯನ್ನು ಸ್ಥಗಿತಗೊಳುವಂತೆ ರೈತರು ಆಗ್ರಹಿಸಿದ್ದಾರೆ.

ಬುಕ್ಕನಹಳ್ಳಿ ಕೆರೆಗೆ ಹೊಂದಿಕೊಂಡಿರುವ ರೈತ ರಾಮ ರೆಡ್ಡಿ ಎಂಬವರು ಸುಮಾರು 2 ರಿಂದ 3 ಲಕ್ಷ ರೂಗಳ ವೆಚ್ಚದಲ್ಲಿ ಟೊಮೆಟೊ ಬೆಳೆ ಇಟ್ಟಿದು ಇದೀಗ ಸರ್ಕಾರ ಅವರ ತೋಟದ ಬಳಿ ಪಕ್ಕದಲ್ಲಿರುವ ಕೆರೆಯಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಣ್ಣಿನ ದೂಳು ಬೆಳೆ ಮೇಲೆ ಬಿದ್ದು ಬೆಳೆ ನಾಶವಾಗುತ್ತಿದೆ ಆದ್ದರಿಂದ ಬೆಳೆ ಕಟಾವು ಮುಗಿದ ನಂತರ ಕಾಮಗಾರಿಯನ್ನು ಆದವರೆಗೂ ಸ್ಥಗಿತಗೊಳಿಸುವಂತೆ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ .

ರೈತರ ನೆರವಿಗೆ ಧಾವಿಸಿ ಬಂದಿದ್ದ ರೈತ ಸಂಘದ ತಾಲೂಕು ಯುವ ಅಧ್ಯಕ್ಷ ನಾಗಭೂಷಣ ಮಾತನಾಡಿ ಈಗಾಗಲೇ ತಾಲೂಕಿನಲ್ಲಿ ಮಳೆ ಬೆಳೆ ಮತ್ತು ಬೆಲೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ, ಇಂತಹ ಸಮಯದಲ್ಲಿ ಬೆಳೆದಿರುವ ಬೆಳೆ ನಾಶ ಮಾಡಲು ಮುಂದಾಗಿರುವ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷಾಂತರ ರೂಗಳ ವೆಚ್ಚದಲ್ಲಿ ಬೆಳೆ ಇಟ್ಟಿದು ಬೆಳೆ ನಾಶವಾಗದಂತೆ ಕಾಮಗಾರಿ ಕೈಗೊಂಡರೆ ನಮ್ಮದೇನು ಅಭ್ಯಂತರ ಇಲ್ಲ ಆದರೆ ಬೆಲೆ ಇರುವ ತೋಟದ ಪಕ್ಕದಲ್ಲಿ ಹೂಳು ಎತ್ತುವ ಕಾಮಗಾರಿ ಕೈಗೆತ್ತಿಕೊಂಡಿರುವುದ್ದರಿಂದ ಬೆಳೆ ನಾಶವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೇ ಸ್ಥಳ ತನಿಖೆ ನಡೆಸಿ ಕೆಲ ದಿನಗಳಕಾಲ ಕಾಲ ಅವಕಾಶ ನೀಡಿ ಬೆಳೆ ಮುಗಿದ ನಂತರ ಹೂಳು ಎತ್ತುವ ಕಾಮಗಾರಿ ಕೈಗೆತ್ತಿಕೊಳುವಂತೆ ಅವರು ಮನವಿ ಮಾಡಿದ್ದಾರೆ.