ಮತಯಾಚನೆಗೆ ಬಂದ್ರೆ ಮರ್ಯಾದೆ ಕಳೀತೀವಿ.

313

ಬೆಂಗಳೂರು ನಗರ/ಮಹದೇವಪುರ:- ಬೇಸಿಗೆ ಆರಂಭದಲ್ಲೇ  ಬೆಂಗಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಮತ ಕೇಳಲು ಬರಲಿ ತಕ್ಕಪಾಠ ಕಲಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಹೂಡಿ ವಾರ್ಡ್ ಹೂಡಿ ಗಾರ್ಡನ್ (ತಿಗಳರಪಾಳ್ಯ)ದಲ್ಲಿ ತಿಗಳರು, ದಲಿತರೇ ಹೆಚ್ಚು ವಾಸಮಾಡುತ್ತಿದ್ದು ಕಳೆದ 3 ತಿಂಗಳಿಂದ ನೀರು ಸರಬರಾಜಾಗದೆ  ಹಿಡಿಶಾಪ ಹಾಕುತ್ತಿದ್ದಾರೆ ಪಾಲಿಕೆ ಸದಸ್ಯ ಅಥವಾ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಪೋನ್ ಮಾಡಿದರೆ ಕರೆ ಸ್ವೀಕಾರ ಮಾಡುತ್ತಿಲ್ಲ, ಈಗ ಮತ ಕೇಳಲು ಬರಲಿ ತಕ್ಕಪಾಠ ಕಲಿಸುತ್ತವೆಂದು ಸ್ಥಳೀಯ ನಿವಾಸಿ ವರಲಕ್ಷ್ಮಿ ಎಚ್ಚರಿಕೆ ನೀಡಿದರು.
ಇನ್ನು ಇಲ್ಲಿನ ಅಕ್ಕ ಪಕ್ಕದ ಶ್ರೀಮಂತರ ಮನೆಗಳಲ್ಲಿ ವಾಟರ್ ಮೀಟರ್ ಇಲ್ಲ ಬಡ ದಲಿತರ ಮನೆಗಳಲ್ಲಿ ವಾಟರ್ ಮೀಟರ್ಗಳಿವೆ ಆದರೆ ಶ್ರೀಮಂತರ ಮನೆಗಳಿಗೆ ನೀರು ಬರ್ತಿದೆ ನಮ್ನಂತ ಬಡ ದಲಿತರ ಮನೆಗಳಿಗೆ ನೀರಿಲ್ಲ ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಿ ಮತ ಕೇಳಲು ಬಂದವರಿಗೆ ಗ್ರಹಚಾರ ಬಿಡಿಸುತ್ತೇವೆಂದು ಹೆಚ್.ಸಿ.ರಂಗಸ್ವಾಮಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಸ್ಥಳಿಯರಾದ ಹೆಚ್.ಸಿ.ಕೃಷ್ಣ, ಕಿಟ್ಟಿ, ಮುನಿರಾಜು, ಪ್ರಭು, ನಳಿನಮ್ಮ, ಲಕ್ಷ್ಮಮ್ಮ ಸೇರಿದಂತೆ ಮುಂತಾದವರು ಹಾಜರಿದ್ದರು.