ಸರ್ಕಾರಿ ಆಸ್ಪತ್ರೆಯಲ್ಲಿ ಸೆಲ್ಫ್ ಸರ್ವೀಸ್.!?

975

ಚಿಕ್ಕಬಳ್ಳಾಪುರ/ಚಿಂತಾಮಣಿ:ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿರುವ ರೋಗಿಗಳ ಜೊತೆ ಸಂಬಂಧಿಕರೆ ಇಲ್ಲಿ ಗ್ಲುಕೋಸ್ ಬಾಟಲ್ ಮತ್ತು ಇಂಜೆಕ್ಷನ್ ನೀಡುತ್ತಿರುವುದು ಕಂಡು ಬಂದಿದು ಎಲ್ಲಿ ಅಂತೀರಾ ಚಿಂತಾಮಣಿಯ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ.

ಯಾಕೆ ಎಂದು ರೋಗಿ ಸಂಬಂಧಿಕರ ಹತ್ತಿರ ವಿಚಾರಣೆ ಮಾಡಿದಾಗ ಅವರು ಹೇಳಿದ್ದು ಹೀಗೆ ನಾವು ಇಲ್ಲಿನ ಸಿಸ್ಟರ್ ಗುಲ್ಕೋಸ್ ಬಾಟಲ್ ಹಾಕಿ ಹೋದ ನಂತರ ರೋಗಿ ಕಡೆ ಬಂದಿಲ್ಲ, ನಾವು ಅವರನ್ನು ಕರೆದಾಗ ಸ್ಪಂದಿಸಿಲ್ಲ ಹಾಗಾಗಿ ನಾವೇ ಇಂಜೆಕ್ಷನ್ ನೀಡುತ್ತಿದ್ದೇವೆ ಎಂದು ಹೇಳುತ್ತಾರೆ.

ಮತ್ತೆ ನಾವು ಅಲ್ಲಿನ ವೈಧ್ಯರೊಬ್ಬರನ್ನು ವಿಚಾರಿಸಿದಾಗ ಅವರು ಉಡಾಫೆ ಉತ್ತರವನ್ನು ನೀಡಿ, ಅದು ಏನು ಅಂತೀರ ಈ ಆಸ್ಪತ್ರೆಯಲ್ಲಿ ಕಡಿಮೆ ಸ್ಟಾಫ್ ಇರೋದ್ರಿಂದ ಈ ರೀತಿ ಅಷ್ಟೆ ಎನ್ನುತ್ತಾರೆ.

ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಿಬ್ಬಂದಿಯ ಕೊರೆತೆಯನ್ನು ನೀಗಿಸಿ ಸಮಸ್ಯೆ ಬಗೆ ಹರಿಸುತ್ತಾರಾ ಕಾದು ನೋಡಬೇಕಾಗಿದೆ .