ಮೇವು ಬ್ಯಾಂಕ್ ರೈತರು ಸದ್ಬಳಕೆ ಮಾಡಿಕೊಳ್ಳಿ.

397

ಚಿಕ್ಕಬಳ್ಳಾಪುರ/ಚಿಂತಾಮಣಿ:ಬರದ ಹಿನ್ನೆಲೆ ಯಲ್ಲಿ ಸರ್ಕಾರ ಜಾನುವಾರುಗಳಿಗೆ ಮೇವು ಬ್ಯಾಂಕ್ ತೆರೆದಿದ್ದು ರಿಯಾಯ್ತಿ ದರದ ಮೇವು ಪಡೆದು ಜಾನುವಾರುಳನ್ನು ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ವಿಶ್ವನಾಥ್ ತಿಳಿಸಿದರು .
ನಗರದ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ಸಮೃದ್ದ ಮೇವು ಗೋವುಗಳ ನಲಿವು ನಿರ್ವಹಣೆ ಯೋಜನೆಯಡಿ ಕಸಬಾ ಹೋಬಳಿಯ ಜಾನುವಾರು ಮಾಲಿಕರಿಗೆ ಮೇವು ವಿತರಿಸಿ ಮಾತನಾಡಿದರು .

69 ರೂ.ಗೆ ಮೇವಿನಚೀಲ ಜಾನುವಾರುಗಳನ್ನು ಹೊಂದಿರುವ ರೈತರಿಗೆ 32 ಕೆಜಿ ಮೇವಿನ ಚೀಲ ವನ್ನು 69 ರೊ.ಗೆ ರಿಯಾಯಿತಿ ದರದಲ್ಲಿ ಮೇವು ವಿತರಣೆ ಮಾಡಲಾಗುತ್ತಿದೆ. ಜಾನುವಾರು ಗಳು ರುವ ರೈತರು ಆಧಾರ್ ಕಾರ್ಡ್ ನ ನಕಲು ಪ್ರತಿ ನೀಡಿ ನೊಂದಾಯಿಸಿಕೊಂಡು ಮೇವು ಪಡೆದು ಬಹುದು ಎಂದು ತಿಳಿಸಿದರು.

ಇನ್ನೂ ತಾಲೂಕಿನಲ್ಲಿ ಮೇವಿನ ಹೆಚ್ಚಿನ ಬೇಡಿಕೆ ಯಿದ್ದು ಬೇಡಿಕೆ ಮುಂದುವರಿದರೆ ಹಂತ ಹಂತ ವಾಗಿ ಮೇವು ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ತಾಲೂಕ ಪಂಚಾಯತ್ ಅಧ್ಯಕ್ಷರಾದ ಕವಿತಾ,ಎಪಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಪಶುವೈದ್ಯಾಧಿಕಾರಿ ಬೈರಾರೆಡ್ಡಿ, ಪಶುವೈದ್ಯರಾದ ಪ್ರಿಯಾಂಕಾ,ಕಲ್ಪನಾ ,ಮಧುಸೂದನ್, ಕಂದಾಯ ಇಲಾಖೆ ಸಿಬ್ಬಂದಿ ಚಂದ್ರಶೇಖರ್, ಅಂಬರೀಶ್ , ಮುನಾವರ್,ಕಾಗತಿ ಗ್ರಾಮ ಪಂಚಾಯತನ ನೌಕರರು ಇದ್ದರು.