ಒತ್ತುವರಿ ತೆರವು…

288

ಚಿಕ್ಕಬಳ್ಳಾಪುರ/ಚಿಂತಾಮಣಿ: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾನೂನಿಗೆ ವಿರುದ್ದವಾಗಿ ನಡೆದುಕೊಂಡರೆ ಅತಂಹವರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಹಶೀಲ್ದಾರ್ ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ .

ಹಲವು ವರ್ಷಗಳಿಂದ ಕೈವಾರ ಗ್ರಾಮದ ದಿಂದ ಕೊಂಗನಹಳ್ಳಿಗೆ ತೆರಳುವ ರಸ್ತೆ ಸರ್ವೆನಂಬರ್ 15 ನಂಬರ್‌ಗಳಲ್ಲಿ ಹಾದು ಹೋಗುವ ಸುಮಾರು ಮೂರು ಕಿ.ಮೀ ಉದ್ದದ ರಸ್ತೆಯನ್ನು ಹಲವುರು ಒತ್ತುವರಿ ಮಾಡಿಕೊಂಡಿದ್ದರು, ಒತ್ತುವರಿ ಯಾಗಿದ್ದ ರಸ್ತೆಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರಗೆ ಸೋಮವಾರ ಒತ್ತುವರಿಯಾಗಿದ್ದ ರಸ್ತೆಯನ್ನು ತೆರವುಗೊಳಿಸಿದ ತಹಶಿಲ್ದಾರ್ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸರ್ಕಾರಿ ಭೂಮಿಯನ್ನು ಯಾರ ಅತಿಕ್ರಮಿಸಿ ಕೊಂಡರೂ ವರಿಗೆ ಕಾನೂನಡಿ ಶೀಕ್ಷತಪ್ಪಿದಲ್ಲ ಎಂದರು .
ಬರಪೀಡಿತ ಬಯಲು ಸೀಮೆಯಲ್ಲಿ ಜನರು ಜೀವಿಸಲು ನೀರು ಆಹಾರ ಎಷ್ಟು ಮುಖ್ಯವೋ ಸರ್ಕಾರಿ ಸ್ವತ್ತುಗಳಾದ ರಸ್ತೆ , ಕೆರೆಕುಂಟೆ , ರಾಜಕಾಲುವೆಗಳ ರಕ್ಷಣೆಯೂ ಆಷ್ಟಮುಖ್ಯ ಎಂದ ಅವರು ಇಂದು ರಸ್ತೆಗಳು ರಾಜಕಾಲುವೆಗಳನ್ನು ಕಾಪಾಡಿಕೊಂಡು ಉಳಿಸಿಕೊಂಡರ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನ ಪರಿತಪ್ಪಿಸಬೇಕಾಗುತ್ತೆಂದು ತಿಳಿಸಿದರು .

*ಡಿಸಿ ಆದೇಶದಂತೆ ಕಾರ್ಯ* : ಇನ್ನೂ ಕೈವಾರ ಗ್ರಾಮದ 15 ಸರ್ವೆ ನಂಬರ್‌ಗಳಲ್ಲಿ ಒತ್ತುವರಿಯಾಗಿದ್ದ ಮೂರು ಕಿ .ಮೀ . ಉದ್ದದ ರಸ್ತೆಯನ್ನು ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ರವರು ಭೇಟಿ ನೀಡಿ ಪರಿಶೀಲಿಸಿದ್ದು ಒತ್ತುವರಿ ಸಾಬೀತಾದ ಹಿನ್ನಲೆ ಒತ್ತುವರಿಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ನೀಡಿದ ಆದೇಶದವರಗೆ .ರಸ್ತೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

*ಸ್ಥಳಿಯರಿಂದ ವಿರೋದ*:- ಮುಂಚಿತವಾಗಿ ಯಾವುದೇ ನೋಟಿಸು ನೀಡದ ತೋಟಗಳಲ್ಲಿ ಬೆಳೆದು ನಿಂತ ಬೆಳೆಯನ್ನು ಒತ್ತುವರಿ ಹೆಸರಲ್ಲಿ ನಾಶ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳಿಯರು ಪ್ರಶ್ನಿಸಿ ತೆರವು ಕಾರ್ಯಚರಣೆಗೆ ಅಡ್ಡಿ ಪಡಿಸಿರು ನಂತರ ದಂಡಾಧಿಕಾರಿಗಳು ಖುದ್ದು ಮುಂದೆ ನಿಂತು ಒತ್ತುವರಿಯನ್ನು ತೆರವುಗೊಳಿಸಿದರು .

ಈ ವೇಳ ಕೈವಾರ ಹೋಬಳಿಯ ಉಪತಹಶೀಲ್ದಾರ್ ಮೋಹನ್ ಕುಮಾರ್ , ಕಂದಾಯ ವೃತನಿರೀಕ್ಷಕ ಅಂಬರೀಶ್ . ಕೈವಾರ ಗ್ರಾಮಾಂತರ ಠಾಣೆ ಪೋಲಿಸರು, ಅಧಿಕಾರಿಗಳು ಸೇರಿದಂತೆ ಮತ್ತಿತರರು ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಜರಿದ್ದರು