ಮಿನಿಪಾರೆಸ್ಟ್ ನಿರ್ಮಾಣಕ್ಕೆ ಚಾಲನೆ‌ ನೀಡಿದ ಸಂಸದರು.

556

ಬೆಂಗಳೂರು ನಗರ/ಮಹದೇವಪುರ:– ಒಂದು ಕಾಲದಲ್ಲಿ ಮರಗಿಡಗಳಿಂದ ಕೂಡಿಕೊಂಡು ಅರಣ್ಯದಂತಿದ್ದ ಬೆಂಗಳೂರು ನಗರ ಇತ್ತೀಚೆಗೆ ಕಾಂಕ್ರೀಟ್ ಕಾಡಾಗಿದ್ದು, ಮತ್ತೆ ಬೆಂಗಳೂರಿನಲ್ಲಿ ಅರಣ್ಯ ನಿರ್ಮಿಸಲು ಇಲ್ಲೊಂದು ಏರಿಯಾ ಜನರು ಮುಂದಾಗಿದ್ದಾರೆ. ಅದು ಎಲ್ಲಿ ಅಂತೀರ ಈ ಸ್ಟೋರಿ ನೋಡಿ.
ನೂರಾರುಮಕ್ಕಳು ಹಾಗೂ ಪೋಷಕರು ಸರ್ಕಾರಿ ಜಾಗದಲ್ಲಿ ಮಿನಿ ಪಾರೆಸ್ಟ್ ನಿರ್ಮಿಸಲು ಸಸಿ ಗಳನ್ನು ನೆಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿನ ದೊಡ್ಡನೆಕ್ಕುಂದಿ ವಾರ್ಡ್ ಗ್ರೀನ್ ಡೊಮೈನ್ ಬಡಾವಣೆಯಲ್ಲಿ.

ಇಲ್ಲಿನ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಿನಿಅರಣ್ಯ ನಿರ್ಮಾಣ ಕಾರ್ಯಕ್ಕೆ ಸಂಸದ ಪಿ.ಸಿ. ಮೋಹನ್ ಚಾಲನೆ ನೀಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬೈಟ್: ಪಿ.ಸಿ. ಮೋಹನ್, ಸಂಸದ

ಕಾರ್ಯಕ್ರಮದಲ್ಲಿ ಸ್ಥಳಿಯ ಪಾಲಿಕೆಸದಸ್ಯೆ ಶ್ವೇತಾ ವಿಜಯ್ ಕುಮಾರ್ ಭಾಗವಹಿಸಿದ್ದು ಜಿಡಿಎಲ್ ವತಿಯಿಂದ ಪರಿಸರ ಕಾಳಜಿ ವಹಿಸುವ ಉದ್ದೇಶ ದಿಂದ ಈ ಮಿನಿ ಅರಣ್ಯನಿರ್ಮಾಣ ಕಾರ್ಯಕ್ರಮ ಮಾಡಲಾಗುತ್ತಿದೆ.ಪ್ರತಿ ಮಕ್ಕಳ ಕೈಗಳಿಂದ ಒಂದೊಂದು ಸಸಿನೆಟ್ಟು ಮಕ್ಕಳಂತೆಯೇ ಗಿಡ ಗಳನ್ನು ಪೋಷಿಸಬೇಕು ಎಂದು ಮನವಿ ಮಾಡಿ ಅವರು 250 ಸಸಿಗಳನ್ನು ಇಂದು ನೆಡಲಾಗಿದ್ದು, ಪಕ್ಷಿಗಳಿಗೆ ಗಿಡಗಳಲ್ಲಿಯೇ ವಾಟರ್ ಪಾಟ್ ಇಡುವ ಮೂಲಕ ಪಕ್ಷಿಗಳಿಗೆ ಸಹ ನೀರು ದಾಹ ನೀಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೈಟ್: ಶ್ವೇತಾ ವಿಜಯ್ ಕುಮಾರ್, ಪಾಲಿಕೆ ಸದಸ್ಯೆ

ಒಟ್ಟಾರೆ ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ಸಿಟಿಯಾಗಿ ಮಾರ್ಪಟ್ಟು ಇದೀಗ ಪಾರೆಸ್ಟ್ ಸಿಟಿಯಾಗಲುಹೊರೆಟಿರುವುದು ಸಂತಸ ತಂದಿದೆ.