ಹಣ್ಣು,ಹಂಪಲು ಹಂಚಿ ಅರ್ಥಪೂರ್ಣ ಆಚರಣೆ…

52

ನಗರಸಭೆ ಸದ್ಯಸರ ಹುಟ್ಟಿದ ಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ತರಕಾರಿ ಮತ್ತು ಹಣ್ಣು ಹಂಪಲು ವಿತರಣೆ.

ಚಿಕ್ಕಬಳ್ಳಾಪುರ /ಚಿಂತಾಮಣಿ:ಲಾಕ್ ಡೌನ್ ಹಿನ್ನೆಲೆಯಲ್ಲಿ ಪೌರಕಾರ್ಮಿಕರಿಗೆ ಆಶಾ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿಗೆ ಇಂದು ವಾರ್ಡ್ ನಂಬರ್ 11 ನೇ ನಗರ ಸಭೆ ಸದಸ್ಯರಾದ ಅಕ್ಷಯ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಪೌರಕಾರ್ಮಿಕರಿಗೆ ತರಕಾರಿ ಮತ್ತು ಆರ್ಯವೈಶ್ಯ ಮಂಡಳಿ ವತಿಯಿಂದ ಇಂದು ಹಣ್ಣು-ಹಂಪಲು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್ ಅವರು ಪೌರಕಾರ್ಮಿಕರು ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆ ಮಾಡುತ್ತಾರೆ ಇವರು ನಮಗಾಗಿ 24ಗಂಟೆ ಕೆಲಸ ಮಾಡುತ್ತಿದ್ದಾರೆ, ಅದರಿಂದ ಇಂದು ನಾವು ಅವರಿಗೆ ತರಕಾರಿ ಮತ್ತು ಹಣ್ಣು ಹಂಪಲು ವಿತರಣೆ ಮಾಡುತ್ತಿದ್ದೇವೆ ಎಂದರು. ಈ ವೇಳೆ ಆರ್ಯವೈಶ್ಯ ಮಂಡಳಿಯ ಸದಸ್ಯರು ಮತ್ತು ನಗರಸಭೆಯ ಪರಿಸರ ಅಭಿಯಂತರ ಉಮಾಶಂಕರ್, ಆರತಿ, ಪ್ರತಿಭಾ , ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅನಂದ್ ಕುಮಾರ್ ನಗರ ಸಭೆ ಸದಸ್ಯ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.