ಪೌರಕಾರ್ಮಿಕರಿಗೆ ಬಿರಿಯಾನಿ ಊಟ.!

94

ಚಿಕ್ಕಬಳ್ಳಾಪುರ/ಚಿಂತಾಮಣಿ:ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಇಟ್ಟಿರುವ ನಿರಾಶ್ರಿತರಿಗೆ,ನಗರಸಭೆಯ ಪೌರ ಕಾರ್ಮಿಕರಿಗೆ ಮತ್ತು ಪೊಲೀಸ್ ಸಿಬ್ಬಂಧಿಗೆ ಬೆಳಗಿನ ಉಪಹಾರಕ್ಕಾಗಿ ಬಿರಿಯಾನಿ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತರು ಹರೀಶ್ ರವರು ನಗರಸಭೆ ಪೌರ ಕಾರ್ಮಿಕರಿಗೆ ಮತ್ತು ನಿರಾಶ್ರಿತರಿಗೆ ವಾಯುಪುತ್ರ ನಿವಾಸಿಗಳಿಂದ ಹಾಗೂ ದಾನಿ ಗಳಿಂದ ಊಟದ ವ್ಯವಸ್ಥೆ ಹಾಗೂ ಉಪಹಾರ ದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಿದ್ದಾರೆ ಇವರಿಗೆ ನಗರಸಭೆ ಆಡಳಿತ ವತಿಯಿಂದ ಕೃತಜ್ಞ ತೆಗಳನ್ನು ಸಲ್ಲಿಸಿದರು. ನಂತರ ಮಾತನಾಡಿದ ವಾಯುಪುತ್ರ ನಗರದ ನಿವಾಸಿ ಕೆಎಂ.ಸಿದ್ದಪ್ಪ ಮತ್ತು ಎನ್.ವೆಂಕಟಾ ಚಲಪತಿ ಮಾತನಾಡಿ ಲಾಕ್ ಡೌನ್ ಆಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಿರಾಶ್ರಿತರಿಗೆ ಆಸರೆ ನೀಡಿ ಅವರಿಗೆ ಊಟ ಮತ್ತು ಇನ್ನಿತರ ವ್ಯವಸ್ಥೆಯನ್ನು ಮಾಡಿ ಕೊಟ್ಟಿದ್ದು ಇವರಿಗೆ ನಮ್ಮಿಂದ ಬೆಳಗಿನ ಉಪಹಾರದ ಬಿರಿಯಾನಿ ನೀಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ನಿವಾಸಿಗಳಾದ ಕೆ.ವಿಮತ್ ಪ್ರಕಾಶ್,ದಸ್ತಗೀರ್ ಸಾಬ್,ಗೋವಿಂದರಾಜು,ಶ್ರೀನಿವಾಸ್,ಸತ್ಯಪ್ರಕಾಶ್,ಅಶ್ವಥ್ ರೆಡ್ಡಿ, ಟಿ.ಚಲಪತಿ,ಮುನಿಯಪ್ಪ,ನರಸಿಂಹನ್ನ,ಬಿ.ಇ.ಒ ಸಿಬ್ಬಂದಿ ವೆಂಕಟೇಶ್,ವೆಂಕಟಶಿವಾರೆಡ್ಡಿ,ಜಯರಾಮ ರೆಡ್ಡಿ,ರಮಣ ರೆಡ್ಡಿ,ಎಸ್ಸಿಎಸ್ಟಿ ಜಿಲ್ಲಾಧ್ಯಕ್ಷ ಶ್ರೀನಿವಾಸ,ಅಶ್ವತ್ ನಾರಾಯಣ್,ಶಿಕ್ಷಕರಾದ ಎನ್ಕೆ.ಕೃಷ್ಣಾರೆಡ್ಡಿ,ಪ್ರತಾಪ್,ಕೆಎನ್.ರಮಣ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.