ವಲಸೆ ಕಾರ್ಮಿಕರಿಗೆ ಬಸ್ಸಿನ ವ್ಯವಸ್ಥೆ..

60

ಚಿಕ್ಕಬಳ್ಳಾಪುರ/ಚಿಂತಾಮಣಿ :ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ,ತಮ್ಮ ಊರುಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಮಂಗಳವಾರ ಒಂದು ದಿನ ಎರಡು ಬಸ್‌ಗಳಲ್ಲಿ 31 ವಲಸೆ ಕಾರ್ಮಿಕರು ಸಂತಸದಿಂದ ಪ್ರಯಾಣ ಮಾಡಿದರು.

ಪ್ರತಿಯೊಬ್ಬರ ಹೆಸರು,ಮೊಬೈಲ್ ಸಂಖ್ಯೆ ಪಡೆದು ಆರೋಗ್ಯತಪಾಸಣೆ ನಡೆಸಿದ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.  ಮಂಗಳವಾರ ಕೂಡ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಒಂದೂವರೆ ತಿಂಗಳಿಂದ ಕೂಲಿಯೂ ಇಲ್ಲದೆ ಬರಿಗೈ ಆಗಿರುವ ಕಾರ್ಮಿಕರು ಟಿಕೆಟ್ ಪಡೆದು ಪ್ರಯಾಣಿಸಲು ಸಾಧ್ಯವಾಗದೆ ವಿವಿಧ ನಗರದಲ್ಲಿ ಮಕ್ಕಳು,ಮರಿ,ಗಂಟು,ಮೂಟೆಗಳೊಂದಿಗೆ ಉಳಿದಿದ್ದರು.  ಇದಕ್ಕೆ ತಕ್ಷಣವೇ ಸ್ಪಂದಿಸಿದ ತಹಸಿಲ್ದಾರ್ ಹನುಮಂತರಾಯಪ್ಪ ರವರು ಜಿಲ್ಲಾಧಿಕಾರಿಗಳಿಗೆ ಅವರ ವಲಸಿಗರ ಊರನ್ನು ತಲುಪಲು ಜಿಲ್ಲಾಧಿಕಾರಿಗಳಿಗೆ ಅನುಮತಿ ಪತ್ರವನ್ನು ಬರೆದು ಅವರ ಕಡೆಯಿಂದ ಅನುಮತಿ ಪಡೆದು ಎರಡು ಬಸ್ಸುಗಳ ವ್ಯವಸ್ಥೆ ಮಾಡಿ ಅವರ ತಮ್ಮ ತಮ್ಮ ಊರಿಗೆ ಕಳಿಸಿಕೊಟ್ಟರು ‘ತುತ್ತಿನ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟು ಚಿಂತಾಮಣಿಗೆ ಬಂದ ನಾವು ಒಂದೂವರೆ ತಿಂಗಳಿಂದ ಸಂಕಟ ಅನುಭವಿಸಿದ್ದೇವೆ. ನಮಗೆ ಸ್ಪಂದಿಸಿ ತಹಸೀಲ್ದಾರ್ ಅವರು ನಮ್ಮನ್ನು ಒಂದು ಕಡೆ ಇಟ್ಟು ನಮಗೆ ಮೂರಹೊತ್ತು ಊಟ ಬಟ್ಟೆ ಎಲ್ಲವನ್ನು ನೀಡಿ ನಮಗೆ ಸಹಕರಿಸಿದ್ದಕ್ಕೆ ತಾಲೂಕು ಆಡಳಿತ ಮತ್ತು ನಗರಸಭೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ಹನುಮಂತ ರಾಯಪ್ಪ, ಕಂದಾಯ ಇಲಾಖೆ ಅಧಿಕಾರಿ ಅಂಬರೀಶ್,ಸೆಕ್ರೆಟ್ರಿ ಚಂದ್ರಶೇಖರ್ ಮತ್ತು ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರು ಎಂ.ಸಿ ಆಂಜನೇಯರೆಡ್ಡಿ,(ಎಟಿಸಿ) ಶ್ರೀನಿವಾಸ್ ಅವರು ಕಾರ್ಮಿಕರನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.