ಕೊರೊನಾ ಓಡಿಸಲು ಗ್ರಾಮದೇವತೆಗೆ ಪೂಜೆ.

53

ಮಂಡ್ಯ/ಮಳವಳ್ಳಿ : ಸೀಲ್ ಡೌನ್ ನಿಂದಾಗಿ ಗ್ರಾಮ ದೇವತೆ ಪೂಜೆಗೆ ಅಡ್ಡಿ ಯಾದ ಹಿನ್ನೆಲೆ ಗ್ರಾಮದೇವತೆ ಪೂಜೆಗಾಗಿ ರಸ್ತೆಯಲ್ಲಿ 4 ಕಲ್ಲು ಇಟ್ಟು ರಸ್ತೆ ಮದ್ಯ ಭಕ್ತರಿಂದ ಪೂಜೆ ಸಲ್ಲಿಸಿದ ಪ್ರಸಂಗ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ ಕೊರೋನಾ ದಿಂದ ಮಳವಳ್ಳಿ ಗ್ರಾಮ ದೇವತೆ ದಂಡಿನ ಮಾರಮ್ಮ ದೇವಾಲಯದ ಬಾಗಿಲು ಬಂದ್ ಮಾಡಲಾಗಿದ್ದು ಇದಲ್ಲದೆ ಮಳವಳ್ಳಿ ಪಟ್ಟಣದಲ್ಲಿ ಕಂಟೈನ್ಮೆಂಟ್ ಇರುವುದರಿಂದ N.E.S ಬಡಾವಣೆಯ 5 ನೇ ವಾರ್ಡ್ ನಲ್ಲಿ ರಸ್ತೆಯಲ್ಲಿ ಕಲ್ಲನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ ರಸ್ತೆಮದ್ಯೆ ಇಟ್ಟ ದೇವರ ಕಲ್ಲನ್ನು ಪೂಜಿಸಿ ಕೋಳಿ ಬಲಿ ನೀಡುವ ಮೂಲಕ ನೈವೇದ್ಯ ಮಾಡಿದ್ದಾರೆ ಊರಿಗೆ ಬಂದಿರೋ ಕೊರೊನಾ ಮಾರಿ ಓಡಿಸಲು ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದರು